ತಂಡಗಳ ಮಧ್ಯೆ ಹೊಡೆದಾಟ : ಮೂವರಿಗೆ ಇರಿತ, ಒಬ್ಬ ಗಂಭೀರ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತಂಡಗಳ ಮಧ್ಯೆ ಉಂಟಾದ ವಿವಾದ ಬಳಿಕ ಘರ್ಷಣೆಯಲ್ಲಿ ಪರ್ಯಾವಸಾನಗೊಂಡ ಘಟನೆ ಚೆರ್ಕಳ ಜಂಕ್ಷನಿನಲ್ಲಿ ಸಂಭವಿಸಿದೆ.

ಘರ್ಷಣೆಯಲ್ಲಿ ಮೂವರು ಇರಿತಕ್ಕೊಳಗಾಗಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ನೆಲ್ಲಿಕಟ್ಟೆ ನಿವಾಸಿ ನೌಫಲ್ (22), ಮೊಹಮ್ಮದ್ ಅಶ್ರಫ್ (22), ಅಬ್ದುಲ್ ಶಿಹಾಬ್ (25) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ ನೌಫಲ್ ಸ್ಥಿತಿ ಗಂಭೀರವಾಗಿದೆ.

ಹೊಳೆಯಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.