ಮರಳು ಸಾಗಾಟ : 3 ಲಾರಿ ವಶಕ್ಕೆ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ಬಾಯಾರು ರಸ್ತೆಯಿಂದ ಎರಡು ಟೋರಸ್ ಲಾರಿಗಳನ್ನು ಹಾಗು ಹೊಸಂಗಡಿಯಿಂದ ಒಂದು ಲಾರಿಯನ್ನು ವಶಪಡಿಸಲಾಗಿದೆ.

2 ಮರಳು ಲಾರಿ ವಶಕ್ಕೆ

ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಬದಿಯಡ್ಕ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ಲಾರಿಯನ್ನು ಧರ್ಮತ್ತಡ್ಕದಿಂದಲೂ, ಇನ್ನೊಂದು ಲಾರಿಯನ್ನು ಕರುವಲ್ತಡ್ಕದಿಂದಲೂ ವಶಪಡಿಸಲಾಗಿದೆ. ಲಾರಿ ಚಾಲಕ ಕುದ್ದುಪದವು ನಿವಾಸಿ ಅಬ್ದುಲ್ ಮುನೀರ್ (24) ವಿರುದ್ಧ ಕೇಸು ದಾಖಲಿಸಲಾಗಿದೆ.


ತೆರಿಗೆ ಪಾವತಿಸದ 7 ಟನ್ ಅಡಿಕೆ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಸಾಗಸುತ್ತಿದ್ದ 7 ಟನ್ ಅಡಿಕೆಯನ್ನು ಕಾಸರಗೋಡು ಮಾರಾಟ ತೆರಿಗೆ ಗುಪ್ತಚರ ವಿಭಾಗದ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಕಮೀಷನರ್ ಜಯರಾಜ್ ನೇತೃತ್ವದಲ್ಲಿ ಪೆರ್ಲ ಪೇಟೆ ಪರಿಸರದಿಂದ ವಶಪಡಿಸಿಕೊಳ್ಳಲಾಗಿದೆ. 3.25 ಲಕ್ಷ ರೂ ದಂಡ ವಸೂಲಿ ಮಾಡಿದ ಬಳಿಕ ಅಡಿಕೆಯನ್ನು ಬಿಟ್ಟುಕೊಡಲಾಯಿತು.

LEAVE A REPLY