ನವಜಾತ ಶಿಶು ಜತೆ ಮೂವರು ಪೊಲೀಸ್ ವಶ

ಬಾಡಿಗೆ ಮನೆಯಲ್ಲಿದ್ದ ಮಗು ಅಪಹರಣ ಜಾಲದ ಮಂದಿ

ನಮ್ಮ ಪ್ರತಿನಿಧಿ ವರದಿ

 ಉಪ್ಪಿನಂಗಡಿ : ಬೆಂಗಳೂರಿನಲ್ಲಿ ಜನಿಸಿದ್ದ ಹಸುಗೂಸನ್ನು ಸಾಕುವುದಕ್ಕಾಗಿಯೇ ಬಾಡಿಗೆ ಮನೆಯೊಂದನ್ನು ಗೊತ್ತುಪಡಿಸಿದ  ಮೂವರು ಯುವಕರ ನಡೆಯ ಬಗ್ಗೆ ಸಂಶಯಗೊಂಡ ಬಾಡಿಗೆ ಮನೆ ಪರಿಸರದ ನಿವಾಸಿಗರು ನೀಡಿದ ಮಾಹಿತಿಯಂತೆ  ಉಪ್ಪಿನಂಗಡಿ ಪೆÇಲೀಸರು, ಮಗು ಅಪಹರಣ ಜಾಲದ ಶಂಕೆಯಲ್ಲಿ  ಮಗು ಸಹಿತ ಮೂವರು ಯುವಕರನ್ನು ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ಬೆಂಗಳೂರು ಮೂಲದ  ಮಹಮ್ಮದ್ ಉದೈಫ್ (29), ಹಿರೆಬಂಡಾಡಿ ಪರಿಸರದ ನಿವಾಸಿಗರಾದ ಸಿಯಾಬ್ (25)  ಸಮೀರ್ (21) ಎಂಬವರು, ಸೋಮವಾರ ಮುಂಜಾನೆ ಪೆರ್ನೆಯಲ್ಲಿ ಬಾಡಿಗೆ ಮನೆಯನ್ನು ಗೊತ್ತುಪಡಿಸಿದ್ದು, ಬಳಿಕ ತಮಿಳುನಾಡು ರಾಜ್ಯದ ರಿಜಿಸ್ಟ್ರೇಶನ್ ಹೊಂದಿದ್ದ ಕಾರಿನಲ್ಲಿ ಹೆತ್ತವರಿಲ್ಲದ ಗಂಡು ಮಗುವನ್ನು ತಂದಿರಿಸಿದ್ದಾರೆ.

ತಂದೆ-ತಾಯಿಯನ್ನು ಹೊಂದಿಲ್ಲದ 58 ದಿನಗಳ ಗಂಡು ಮಗುವೊಂದನ್ನು ಮೂವರು ಯುವಕರು ಪೆರ್ನೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಾಕಲು ಮುಂದಾಗಿರುವುದರ ಹಿಂದೆ ಯಾವುದೋ ಜಾಲವಿರಬಹುದೆಂಬ ಶಂಕೆಯನ್ನು ಮುಂದಿರಿಸಿ ಪೆÇಲೀಸರಿಗೆ ಮಾಹಿತಿ ನೀಡಲಾಯಿತು. ಇದರಂತೆ ದಾಳಿ ನಡೆಸಿದ ಉಪ್ಪಿನಂಗಡಿ ಪೆÇಲೀಸರು ಬೆಂಗಳೂರಿನ ಆಸ್ಪತ್ರೆಯ ಜನನ ಮಾಹಿತಿಯ ಕಾರ್ಡ್ ಸಹಿತವಿದ್ದ ಗಂಡು ಮಗುವನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು.

ಮಗುವಿನ ತಾಯಿ ನೇಪಾಳಕ್ಕೆ ಹೋಗಿದ್ದ ಕಾರಣಕ್ಕೆ ಮಗುವನ್ನು ಆರೈಕೆ ಮಾಡಲು ಮಗುವಿನ ತಂದೆ ವಿನಂತಿಸಿದ ಹಿನ್ನೆಲೆಯಲ್ಲಿ ಮಗುವನ್ನು ತಂದಿರುವುದಾಗಿ ಶಂಕಿತ ಮೂವರು ತಿಳಿಸಿದ್ದು, ಸತ್ಯಾಂಶಕ್ಕಾಗಿ ಪೆÇಲೀಸ್ ವಿಚಾರಣೆ ನಡೆಯುತ್ತಿದೆ.

ಆರೋಪಿಗಳು ಮಗು ಜನಸಿದ್ದಕ್ಕೆ ಪೂರಕವಾಗಿ ಬೆಂಗಳೂರಿನ ಆಸ್ಪತ್ರೆಯ ಜನನ ದಾಖಲೆ ಕಾರ್ಡ್ ಹೊಂದಿದ್ದು, ಅದರಲ್ಲಿ ಮಗುವಿನ ತಂದೆಯ ಹೆಸರು ಜಲಾಲುದ್ದೀನ್ ಹಾಗೂ ತಾಯಿಯ ಹೆಸರು ಕರಿಷ್ಮಾ ಎಂದು ಬರೆಯಲಾಗಿದೆ. ಈ ಜನನ ಕಾರ್ಡ್ ಅಸಲಿಯೋ ನಕಲಿಯೋ ಎಂಬ ಶಂಕೆಯೂ ಮೂಡಿದೆ.

ಯುವಕರ ಮಾತು

ನಂಬಲು ಸಾಧ್ಯವೆ ?

ಶಂಕಿತರ ಪೈಕಿ ಬೆಂಗಳೂರು ಮೂಲದ ಮಹಮ್ಮದ್ ಉದೈಫ್ ನೀಡುವ ಹೇಳಿಕೆಯಂತೆ, ಮಗು ಬೆಂಗಳೂರಿನ ದಂಪತಿಗಳದ್ದಾಗಿದ್ದು ಮಗುವಿನ ತಾಯಿ ಆದಿತ್ಯವಾರದಂದು ತನ್ನ ತವರಾದ ನೇಪಾಳಕ್ಕೆ ಹೋಗಿದ್ದಾಳೆ. ಮಗುವನ್ನು ಆರೈಕೆ ಮಾಡಲು ಅಸಮರ್ಥನಾದ ಮಗುವಿನ ತಂದೆಯ ಕೋರಿಕೆಯಂತೆ ತಾನು ಮಗುವನ್ನು ಒಂದು ತಿಂಗಳ ಮಟ್ಟಿಗೆ  ಸಾಕಲು ದ ಕ ಜಿಲ್ಲೆಯ ಗೆಳೆಯನ ಮನೆಗೆ ಕರೆತಂದೆ.  ಆದರೆ ಅಲ್ಲಿ ನೆಂಟರಿಷ್ಟರು ಬಂದ ಕಾರಣ ಮಗುವನ್ನು ಬಾಡಿಗೆ ಮನೆ ಮಾಡಿ ಸಾಕಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾನೆ.

ಆದರೆ ಯಾವ ತಾಯಿ ತಾನು ಹೆತ್ತ ತನ್ನ ಕರುಳ ಕುಡಿಯನ್ನು ತ್ಯಜಿಸಿ ತಾನೊಬ್ಬಳೇ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನೇಪಾಳದಲ್ಲಿನ ತನ್ನ ತವರು ಮನೆಗೆ ಹೋಗಲು ಸಾಧ್ಯ ? ತನಗೆ ಸಾಕಲು ಏನೇ ಸಮಸ್ಯೆ ಇದ್ದರೂ  ಹಸುಗೂಸನ್ನು ತನ್ನ ಕಣ್ಣೆದುರಿಗೆ ಮಗು ಇರುವಂತೆ ಯಾರನ್ನಾದರೂ  ಸಾಕಲು ವಿನಂತಿಸುವ ಬದಲು ತಾನೇ ನೋಡದ ದೂರದ ಊರಿಗೆ ತನ್ನ ಮಗುವನ್ನು ಯುವಕರು ಕರೆದೊಯ್ಯಲು ಬಿಟ್ಟು ಯುವಕರ ಕೈಯಲ್ಲಿ ಸಾಕಲು ಯಾವ ತಂದೆ ಒಪ್ಪಿಗೆ ನೀಡುತ್ತಾನೆ ? ಮಗುವನ್ನು ಸಾಕಲು ಒಪ್ಪಿರುವ ಗೆಳೆಯನ ಮನೆಯವರು ನೆಂಟರು ಬಂದರೆನ್ನುವ ಕಾರಣಕ್ಕೆ ಸಾಕಲು ನಿರಾಕರಿಸಿದ ಹಿನ್ನೆಲೆ ಏನು ? ಮಗುವಿನ ಆರೈಕೆಯ ಉದ್ದೇಶದಿಂದ ಬಾಡಿಗೆ ಮನೆಯನ್ನು ಮಾಡಿದ ಈ ಮೂವರು ಅವಿವಾಹಿತ ಯುವಕರು ಬಾಡಿಗೆ ಮನೆಯಲ್ಲಿ ಮಗುವಿನೊಂದಿಗೆ ಇರಲು ಸಾಧ್ಯವೇ ? ಯಾವೊಬ್ಬ ಹೆಣ್ಣು ಜೀವವಿಲ್ಲದೆ ಈ ಹಸುಗೂಸನ್ನು ಸಾಕಲು ಈ ಅವಿವಾಹಿತ ಯುವಕರಿಂದ ಸಾಧ್ಯವೇ ?  ಮಗುವಿನ ಆರೈಕೆಯ ಉದ್ದೇಶವೇ ಇದ್ದಿದ್ದರೆ ಮಗುವಿನ ಜನನ ಕಾರ್ಡ್ ಮಗುವಿನ ಮನೆಯಲ್ಲಿ ಇರಬೇಕಿತ್ತೇ ವಿನಃ ಇವರ ಕೈಗೆ ಯಾಕಾಗಿ ಬಂತು ?  ಸಿಕ್ಕಿಬಿದ್ದರೆ ರಕ್ಷಣೆಗಾಗಿ ಜನನ ಕಾರ್ಡ್ ಜೊತೆಗಿರಿಸುವ ಸಾಧ್ಯತೆ ಇದ್ದು, ಅದಕ್ಕಾಗಿ ನಕಲಿ ಜನನ ಕಾರ್ಡ್ ಸಿದ್ದಪಡಿಸಿರುವ ಸಾಧ್ಯತೆಯೂ ಇದೆ. ಮಗುವಿನ ಮಾರಾಟದ ಉದ್ದೇಶದಿಂದ ಗಿರಾಕಿಗಳನ್ನು ಹೊಂದಿಸಿಕೊಳ್ಳಲು ಬಾಡಿಗೆ ಮನೆಯನ್ನು ಗೊತ್ತು ಪಡಿಸಿರಬಹುದೆ ?  ಈ ಎಲ್ಲಾ ಅಂಶಗಳೊಂದಿಗೆ  ಪೆÇಲೀಸ್ ತನಿಖೆ ನಡೆಯುತ್ತಿದೆ.

ಈ ಮಧ್ಯೆ ಮಗುವಿನ ತಂದೆ ತಾನೆಂದು ಹೇಳಿಕೊಂಡ ವ್ಯಕ್ತಿ ದೂರವಾಣಿ ಮೂಲಕ ಪೆÇಲೀಸರಿಗೆ ಸಂಪರ್ಕಕ್ಕೆ ಸಿಕ್ಕಿದ್ದು, ಮಗುವನ್ನು ಪಡೆದುಕೊಂಡು ಹೋಗಲು ತಾನು ಉಪ್ಪಿನಂಗಡಿಗೆ ಬರುವುದಾಗಿ ತಿಳಿಸಿದ್ದಾನೆಂದು ಪೆÇಲಿಸರು ತಿಳಿಸಿದ್ದಾರೆ. ಮಗುವಿನ ತಂದೆ ಎಂದು ಬರುವಾತ ನಿಜವಾಗಿಯೂ ಮಗುವಿನ ಅಪ್ಪನೋ ಅಥವ ನಕಲಿ ಅಪ್ಪನೋ ಎಂದು ಖಾತ್ರಿಪಡಿಸಿ ಮಗುವಿನ ನೈಜ  ವಾರಸುದಾರರು ಸಿಗುವವರೆಗೆ ಮಗುವನ್ನು ಶಿಶು ಸಂರಕ್ಷಣಾಧಿಕಾರಿಗಳ ವಶಕ್ಕೆ ಒಪ್ಪಿಸಲು ಪೆÇಲೀಸ್ ಇಲಾಖೆ ಮುಂದಾಗಿದೆ.  ಅದರಂತೆ ಮಗುವನ್ನು ವಶಕ್ಕೆ ತೆಗೆದುಕೊಂಡಿರುವ ಶಿಶು ಕಲ್ಯಾಣಾಧಿಕಾರಿಗಳು ಮಗುವಿಗೆ ಪುತ್ತೂರಿನ ಆಶ್ರಮವೊಂದರಲ್ಲಿ ಆಶ್ರಯ ಒದಗಿಸಿದ್ದಾರೆ.