ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಮೂವರು ಕುಖ್ಯಾತ ಅಪರಾಧಿ

 ಚಂಡೀಗಢ :  ಕುಖ್ಯಾತ ಪಾತಕಿ ವಿಕ್ಕಿ ಗೊಂಡರ್ ಎಂಬಾತನ ಮೂವರು ಸಹವರ್ತಿಗಳು ತಮ್ಮನ್ನು ಪೊಲೀಸರು ಸುತ್ತು ವರಿದಂತೆಯೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಕಮಲಜಿತ್ ಆಲಿಯಾಸ್ ಬಂಟಿ ಧಿಲ್ಲಾನ್,  ಜಸ್ಪೀತ್ ಸಿಂಗ್ ಆಲಿಯಾಸ್ ಜಂಪಿ ಹಾಗೂ ನಿಶಾನ್ ಸಿಂಗ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ  ಪಂಜಾಬದ ಫರೀದ್ಕೋಟ್ ಪೊಲೀಸರು ಹರ್ಯಾಣ ಪೊಲೀಸರ ಸಹಯೋಗದೊಂದಿಗೆ ಸಿರ್ಸಾ ಜಿಲ್ಲೆಯ ದಾಬ್ವಲಿ ಪಟ್ಟಣದಲ್ಲಿನ ಮನೆಯೊಂದನ್ನು ಸುತ್ತುವರಿದು ಅದರೊಳಗಿದ್ದ   ಮೂವರನ್ನು ಶರಣಾಗುವಂತೆ ಹೇಳಿದ್ದರೂ ಅವರು ಒಳಗಿನಿಂದ ಪೊಲೀಸರತ್ತ ಗುಂಡು ಹಾರಿಸಿದ್ದರು. ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆಯುತ್ತಿದ್ದಂತೆಯೇ ಮೂವರೂ ತಮಗೆ ತಾವೇ ಗುಂಡಿಕ್ಕಿಕೊಂಡಿದ್ದಾರೆ.