ಲೀಗ್ ಸದಸ್ಯನ ಕೊಲೆ : ಮತ್ತೆ ಮೂವರ ಬಂಧನ

ಬಂಧಿತ ಆರೋಪಿಗಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಯೂತ್ ಲೀಗ್ ಕಾರ್ಯಕರ್ತ ಹಾಗೂ ಪೂವ್ವಲ್ ನಿವಾಸಿ ಅಬ್ದುಲ್ ಖಾದರ್ (20) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಪೆÇಲೀಸರು ಬಂಧಿಸಿದ್ದಾರೆ. ಮುದಲ್ಪಾರ ಕಲಾಂ ಮೊಹಮ್ಮದ್ (47), ಬಾವಿಕ್ಕೆರೆ ಫಾರೂಕ್ (30), ಭೋವಿಕ್ಕಾನ ಅಶ್ರಫ್ (28) ಸೆರೆಗೀಡಾದ ಆರೋಪಿಗಳು. ಕೊಲೆಯಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳ ಸಹಿತ ಕೊಲೆ ಪ್ರಕರಣಕ್ಕೆ ಸಹಕರಿಸಿದವರನ್ನು ಬಂಧಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.