ಡಿಸಿ, ಎಸಿ ಕೊಲೆಯತ್ನ : ಮತ್ತೆ ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಹಾಯಕ ಆಯುಕ್ತೆ ಶಿಲ್ಪಾನಾಗ್ ಸೇರಿದಂತೆ ಐವರು ಅಧಿಕಾರಿಗಳು ಮರಳು ಅಡ್ಡೆಗೆ ದಾಳಿ ನಡೆಸಿದ್ದ ವೇಳೆ ಅಧಿಕಾರಿಗಳ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉಡುಪಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಡ್ಲೂರು ನಿವಾಸಿಗಳಾದ ಬಿಲಾಲ್ (26), ಮಸೂರ್ ಮೊಹಮ್ಮದ್ (24) ಮತ್ತು ಜಾಕಿರ್ ಹುಸೇನ್ (32) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.ಅಕ್ರಮ ಮರಳು ಅಡ್ಡೆ ಕಂಡ್ಲೂರಿನ ವಾರಾಹಿಗೆ ದಾಳಿ ನಡೆಸಿದ ಸಂದರ್ಭ 50 ಮಂದಿ ಮರಳು ಮಾಫಿಯಾ ತಂಡದ ಸದಸ್ಯರಿಂದ ಡೀಸಿ ಮತ್ತು ಏಸಿಯವರ  ಕೊಲೆಯತ್ನ ನಡೆದಿತ್ತು.