ಸೆಕ್ಸ್ ವಿಚಾರದಲ್ಲಿ ಪುರುಷರು ಮಾಡುವ ಮೂರು ತಪ್ಪುಗಳು

ಡಾ. ಅನಿಲ್ ಪಾಟೀಲ್

ಹಲವರು, ಮುಖ್ಯವಾಗಿ ಭಾರತೀಯರು ಸೆಕ್ಸ್ ವಿಚಾರದಲ್ಲಿ ಮಾಡುವ ಪ್ರಮಾದಗಳು ಅವರ ಸೆಕ್ಸ್ ಜೀವನವನ್ನೇ ಹಾಳು ಮಾಡುತ್ತವೆ. ಇಂತಹ ತಪ್ಪುಗಳಾಗದಂತೆ ತಡೆಯಲು ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಅಗತ್ಯ. ಮೊತ್ತ ಮೊದಲಾಗಿ ಉತ್ತಮ ಸೆಕ್ಸ್ ಜೀವನ ಹೇಗೆ ನಡೆಸುವುದೆಂದು ತಿಳಿದುಕೊಳ್ಳುವುದು ಅವಶ್ಯ.
ಸೆಕ್ಸ್ ಜೀವನ ರೋಮಾಂಚನಕಾರಿಯಾಗಬೇಕೆಂದಾದರೆ ನಿಮ್ಮ ಬೆಡ್ ರೂಂನಲ್ಲಿ ಏನಾದರೂ ಹೊಸ ಪ್ರಯೋಗ ಮಾಡಿ. ನಿಮ್ಮ ಯೋಚನಾ ಲಹರಿಯಲ್ಲಿ ಬದಲಾವಣೆ ತರುವುದರಿಂದಲೂ ನಿಮ್ಮ ಸೆಕ್ಸ್ ಜೀವನ ಸುಧಾರಿಸುವುದು.
ನಿಮ್ಮ ಸಂಗಾತಿಯನ್ನು 30 ಸೆಕೆಂಡುಗಳಷ್ಟು ಕಾಲ ನೀವು ಆಲಂಗಿಸಿದರೆ ಅದು ಆಕೆಯಲ್ಲಿರುವ ಒಕ್ಸಿಟೋಸಿನ್ ಹಾರ್ಮೋನನ್ನು ಉತ್ತೇಜಿಸುವುದು. ಈ ಹಾರ್ಮೋನ್ ಮಹಿಳೆಯರಲ್ಲಿ ಒಂದು ರೀತಿಯಲ್ಲಿ ನಂಬಿಕೆ ಹಾಗೂ ವಿಶ್ವಾಸದ ಭಾವನೆ ಮೂಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ ?
ಪುರುಷರು ಸೆಕ್ಸ್ ವಿಚಾರದಲ್ಲಿ ಮಾಡುವ ಕೆಲವೊಂದು ಸಾಮಾನ್ಯ ತಪ್ಪುಗಳತ್ತ ಒಮ್ಮೆ ಗಮನ ಹರಿಸಿ, ಪ್ರಾಯಶಃ ಈ ತಪ್ಪುಗಳಿಂದಾಗಿಯೇ ಅವರ ಸಂಗಾತಿಗಳು ಅವರಿಂದ ದೂರವಿರಲು ಬಯಸುತ್ತಿದ್ದಾರೆ.
ಮೌನ ಸೆಕ್ಸ್ : ಹಲವು ಪುರುಷರು ಮಿಲನ ಪ್ರಕ್ರಿಯೆಯ ವೇಳೆ ಮೌನಧಾರಿಗಳಾಗಿ ಬಿಡುತ್ತಾರೆ. ಇದು ತಪ್ಪು ! ನಿಮಗೆ ಆಕೆಯ ಸಾಮೀಪ್ಯ ಬಹಳಷ್ಟು ಇಷ್ಟವೆಂದು ನೀವು ಆಕೆಗೆ ತೋರಿಸಿಕೊಳ್ಳಲೇ ಬೇಕು. ಅದರ ಬದಲು ನೀವು ಮೌನವೃತ ಆಚರಿಸಿದರೆ ನಿಮ್ಮ ಸಂಗಾತಿಗೆ ಮುಜುಗರವಾಗಬಹುದು. ಆಕೆಯಿಂದ ನಿಮಗೆ ಸುಖ ದೊರೆಯುತ್ತಿದೆಯೋ ಅಥವಾ ಇಲ್ಲವೋ ಎಂಬ ಸಂಶಯ ಆಕೆಯ ಮನದಲ್ಲಿ ನಿಮ್ಮ ಮೌನ ಮೂಡಿಸಬಹುದು, ಆಗಾಗ ಸುಖದ ಮುಲುಕಾಟ ಮತ್ತು ನರಳಾಟ ಕೆಟ್ಟದ್ದೇನಲ್ಲ.
ಮೊಲೆ ತೊಟ್ಟಿನ ವಿಚಾರ : ಸೆಕ್ಸ್ ನಡೆಸುವಾಗ ನೀವು ಆಕೆಯ ಮೊಲೆ ತೊಟ್ಟನ್ನು ಕಚ್ಚಿದರೆ ಆಕೆಗೆ ಸುಖ ಸಿಗುವುದೆಂದು ತಿಳಿಯಬೇಡಿ. ಇಂತಹ ಕಾರ್ಯ ಒಂದು ದೊಡ್ಡ ತಪ್ಪು. ಮೊಲೆ ತೊಟ್ಟನ್ನು ಕಚ್ಚುವ ಅಭ್ಯಾಸವನ್ನು ಪ್ರತಿಯೊಬ್ಬ ಪುರುಷ ಬಿಡಲು ಪ್ರಯತ್ನಿಸಬೇಕು. ಸಂಗಾತಿಯೊಂದಿಗೆ ನಯವಾಗಿ ವರ್ತಿಸಿ. ಅಷ್ಟಕ್ಕೂ ಮೊಲೆ ತೊಟ್ಟನ್ನು ಕಚ್ಚಲು ಆಗಾಗ ಯತ್ನಿಸುವುದು ಸೆಕ್ಸಿ ಕೂಡ ಅಲ್ಲ – ಅದು ಆಕೆಗೆ ಸುಖ ನೀಡುವ ಬದಲು ಕೇವಲ ನೋವನ್ನುಂಟು ಮಾಡಬಹುದಷ್ಟೆ.
ಮತ್ತೊಂದು ಮಾತು, ಆಕೆಯನ್ನು ಅಂಕೆಗೋಲಿನಂತೆ ಆಡಿಸಬೇಡಿ – ನೀವು ಹೇಳಿದ ಹಾಗೆ ಆಕೆ ಮಾಡಬೇಕೆಂದೇನೂ ಇಲ್ಲ. ನೀವು ಆಕೆಯ ಮೊಲೆಗಳೊಂದಿಗೆ ಆಟವಾಡುವಾಗ ಆಕೆಯ ಮುಖವನ್ನು ಗಮನಿಸಿ. ನೀವು ಹೀಗೆ ಮಾಡಿದಲ್ಲಿ, ಆಕೆಯ ಆಸೆಗೆ ತಕ್ಕಂತೆ ಯಾವಾಗ ಏನು ಮಾಡಬೇಕೆಂದು ನಿಮಗೆ ತನ್ನಿಂತಾನಾಗಿಯೇ ತಿಳಿಯುತ್ತದೆ.
ಮಿಲನದಾಟವನ್ನು ನಿಮ್ಮ ಸಂಗಾತಿ ಕೂಡ ನಿಮ್ಮಷ್ಟೇ ಎಂಜಾಯ್ ಮಾಡುತ್ತಿದ್ದಾಳೆಯೇ ಎಂಬುದನ್ನು ಗಮನಿಸಿ, ಆಕೆಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳಿ. “ಇದು ನಿನಗೆ ಇಷ್ಟವಾಯಿತೇ?” “ಬೇರೇನಾದೂ ಮಾಡಬೇಕೇ ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ.
ಆಕೆಯ ಮೇಲೆ ಹದ್ದಿನಂತೆ ಎರಗಬೇಡಿ : ನೀವು ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿರಬಹುದು. ಕೇವಲ ಆಕೆಯ ಮೇಲೆರಗಿ ಆಕೆಗೆ ಸಂತಸ ನೀಡಬಹುದೆಂಬ ತಪ್ಪು ಭಾವನೆ ಈ ಚಿತ್ರಗಳನ್ನು ನೋಡಿ ನಿಮ್ಮಲ್ಲಿ ಮೂಡಿರಬಹುದು. ಹಾಗೆ ಖಂಡಿತವಾಗಿಯೂ ಮಾಡಬೇಡಿ. ನಿಮ್ಮ ಸಂಗಾತಿಯ ಮನಸ್ಸನ್ನು ಅರಿತು ಅಂತೆಯೇ ನಯವಾಗಿ ಆಕೆಗಿಷ್ಟವಾಗುವ ರೀತಿಯಲ್ಲಿ ಹಾಗೂ ಭsÀಂಗಿಯಲ್ಲಿ ಮಿಲನದಾಟ ನಡೆಸಿ.
ಈ ಸಲಹೆಗಳನ್ನು ನೀವು ಚಾಚೂ ತಪ್ಪದೆ ಪಾಲಿಸಿದಿರೆಂದಾದಲ್ಲಿ – ನಿಮ್ಮ ಸೆಕ್ಸ್ ಜೀವನ ಅದ್ಭುತವಾಗುವುದು. ನಿಮ್ಮ ಸೆಕ್ಸ್ ತಪ್ಪುಗಳನ್ನು ನಿವಾರಿಸಿ ಉತ್ತಮ ಸೆಕ್ಸ್ ಜೀವನ ನಿಮ್ಮದಾಗಿಸಿಕೊಳ್ಳಿ.
——————–