ಮೊಗ್ರಾಲಲ್ಲಿ ಮೀನುಗಳ ಅಭಿವೃದ್ಧಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಒಳನಾಡ ಜಲಮೂಲಗಳಲ್ಲಿ ಮೀನು ಸಂತತಿಗಳ ಅಭಿವೃದ್ಧಿಗಾಗಿ ಆರಂಭಿಸಲಾದ ಯೋಜನೆಯ ಅಂಗವಾಗಿ ಮೊಗ್ರಾಲ್ ಗ್ರಾಮ ಪಂಚಾಯತಿಯ ಮೊಗ್ರಾಲ್ ಸೇತುವೆಯ ಸಮೀಪದ ಹೊಳೆಯಲ್ಲಿ ಬುಧವಾರ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ಮೂರು ಲಕ್ಷಗಳಷ್ಟು ಮರಿ ಮೀನುಗಳನ್ನು ನೀರಿಗೆ ಬಿಡಲಾಯಿತು
ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ ಎಚ್ ಮುಹಮ್ಮದ್ ಕುಂಞ ಚಾಯಿಂದಡಿ ಮರಿ ಮೀನುಗಳನ್ನು ನೀರಿಗೆ ಬಿಡುವ ಮೂಲಕ ಉದ್ಘಾಟಿಸಿದರು  ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು