ಚಾಲಕರ ಹೊಡೆದಾಟ ಮೂವರು ಆಸ್ಪತ್ರೆಗೆ 6 ಮಂದಿ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ನಿಲೇಶ್ವರದಲ್ಲಿ ಸಿಐಟಿಯು ಕಾರ್ಯಕರ್ತರೊಳಗೆ ಹೊಡೆದಾಟ ನಡೆದು ಮೂರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರು ಮಂದಿ ವಿರುದ್ಧ ನಿಲೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ವಿ ಎಸ್ ಆಟೋ ನಿಲ್ದಾಣದ ಚಾಲಕರಾದ ಸುಧಾಕರ, ಬೈಜು ಹಾಗೂ ಸಿ ಆಟೋ ಚಾಲಕರಾದ ಕಣ್ಣನ್, ಸಾದಿಖ್, ಶಾಜಿ ಹಾಗೂ ಬಾಬು ಎಂಬವರ ವಿರುದ್ಧ ಕೇಸು ದಾಖಲಾಗಿದೆ. ನೀಲೇಶ್ವರ ನಗರ ಸಭೆ ಹಾಗೂ ಆಟೋ ಕೋರ್ಡಿನೇಶನ್ ಸಮಿತಿ ಜಂಟಿಯಾಗಿ ನಗರದಲ್ಲಿ ಏರ್ಪಡಿಸಿದ ರೊಟೇಶನ್ ಸಂಪ್ರದಾಯ ಘರ್ಷಣೆಗೆ ಕಾರಣವಾಗಿದೆ. ಆಡಳಿತ ಪಕ್ಷದ ಮಧ್ಯೆ ಎರಡು ನೇತಾರಗಳ ಮಧ್ಯೆ ಇಲ್ಲಿ ವಿವಾದವಾಗುತ್ತಿದೆ. ಬಳಿಕ ವಿ ಎಸ್ ಭಾವ ಚಿತ್ರವಿರುವ ಫಲಕವನ್ನು ತೆಗೆದು ಹಾಕಿದ್ದು, ಮತ್ತೆ ಘರ್ಷಣೆ ತಾರಕಕ್ಕೇರಲು ಕಾರಣವಾಯಿತು.