ಬೈಕ್ 150 ಅಡಿ ಆಳಕ್ಕೆ ಪಲ್ಟಿ : ಮೂವರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೈಕ್ 150 ಅಡಿ ಆಳದ ಕಂದಕಕ್ಕೆ ಮಗುಚಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಕುಂಬಳೆ ಮಳಿ ನಿವಾಸಿಗಳಾದ ಸುಧೀಶ್ (22), ಮಂಜು (24) ಎಂಬವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ, ನೆಲ್ಲಿಕಟ್ಟೆಯ ಸುನಿಲ(22)ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಾರಣೆ ಕಾರ್ಮಿಕನಾದ ಇವರು ಕೆಲಸ ಮುಗಿಸಿ ಮರಳುತ್ತಿದ್ದಾಗ ಬದಿಯಡ್ಕ ಪೆÇಲೀಸ್ ಠಾಣೆ ಬಳಿಯ ಪೆರಡಾಲ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಪೆÇಲೀಸರು ಹಾಗೂ ನಾಗರಿಕರು ಸೇರಿ ಆಸ್ಪತ್ರೆಗೆ ಸಾಗಿಸಿದ್ದಾರೆ.