ಮೂವರು ವಿದ್ಯಾರ್ಥಿನಿಯರು ನಾಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಪಿಟಿ ಕಾಲೇಜಿಗೆ ತೆರಳಿದ್ದ ರಂಜಿತಾ (18) ಫೆ 11ರಿಂದ ನಾಪತ್ತೆಯಾಗಿದ್ದರೆ, ಶ್ರೀ ದೇವಿ ಟ್ಯುಟೋರಿಯಲ್ಸಿನಲ್ಲಿ 2ನೇ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಲಾವಣ್ಯ (17) ಮತ್ತು ಪ್ರೇಕ್ಷಿತಾ (17) ಎಂಬವರು ಫೆ 11ರಿಂದ ನಾಪತ್ತೆಯಾಗಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.

ಲಾವಣ್ಯ ಎಂದಿನಂತೆ ಬೆಳಿಗ್ಗೆ ಕಾಲೇಜಿಗೆ ಪರೀಕ್ಷೆಗೆ ತೆರಳಿದ್ದು ಮರಳಿ ಬಂದಿಲ್ಲ. ಕಾಲೇಜಿಗೆ ಫೋನ್ ಮಾಡಿ ವಿಚಾರಿಸಿದಾಗ ಕಾಲೇಜಿಗೆ ಬಂದು ಹೋಗಿದ್ದಾರೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರೇಕ್ಷಿತಾ ಕೂಡಾ ತಡವಾಗಿ ಮನೆಗೆ ಬರುತ್ತೇನೆ ಎಂದು ಹೇಳಿದ್ದು, ಮರಳಿ ಬಂದಿಲ್ಲ.