ಬಸ್ ಚಾಲಕನ ಮೇಲೆ ಹಲ್ಲೆ ಕೇಸಿನಲ್ಲಿ ಮೂವರಿಗೆ ತಲಾ 20 ಸಾವಿರ ರೂ ದಂಡ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳ ಸಾರಿಗೆ ಬಸ್ಸನ್ನು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದು ಹೊರಗೆಳೆದು ಹಲ್ಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಚೀಫ್ ಜ್ಯುಡೀಶೀಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ  ತಲಾ 20 ಸಾವಿರ ರೂ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಸೊರ್ಲು ಮೀಪುಗುರಿ ನಿವಾಸಿ ಮೊಹಮ್ಮದ್ ಬಿಲಾಲ್ (19), ಉಳಿಯತ್ತಡ್ಕ ಪುಳಿಕ್ಕೂರು ಪಳ್ಳಂ ನಿವಾಸಿ ಆತಿಫ್ ಸಿ ಎಂ, (20), ಕುಂಬ್ಡಾಜೆ ಕರುವತ್ತಡ್ಕ ಚೂರಿಕ್ಕೋಡ್ ನಿವಾಸಿ ಅಬ್ದುಲ್ಲ ಸಿ ಎಚ್ (36) ಎಂಬಿವರಿಗೆ ಜುಲ್ಮಾನೆ ವಿಧಿಸಲಾಗಿದೆ.

ಜುಲ್ಮಾನೆ ಪಾವತಿಸದೇ ಇದ್ದಲ್ಲಿ ಆರೋಪಿಗಳು 9 ತಿಂಗಳು ಸಜೆ ಅನುಭವಿಸಬೇಕಾಗಿದೆ. 2014 ಮಾರ್ಚ್ 12ರಂದು ಕಾಸರಗೋಡು ಪ್ರಧಾನ ಅಂಚೆ ಕಚೇರಿ ಪರಿಸರದಲ್ಲಿ ಈ ಘಟನೆ ನಡೆದಿತ್ತು.