ಮೂವರು ಸರಗಳ್ಳರ ಸೆರೆ 4.5 ಲಕ್ಷ ರೂ ಚಿನ್ನ ವಶಕ್ಕೆ

ಮಂಗಳೂರು : ಜನರಹಿತ ಪ್ರದೇಶಗಳಲ್ಲಿ ನಡೆದು ಹೋಗುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ಮಾಡುತ್ತಿದ್ದ ಮೂರು ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಪೆÇಲೀಸ್ ತಂಡ ಬಂಧಿಸಿದೆ.

ಮಂಗಳೂರು ಆಕಾಶಭವನದ ಅಲ್ವಿನ್ ಯಾನೆ ಅಲ್ವಿನ್ ಡೊಮಿನಿಕ್ ಮಿರಾಂಡ (37), ಅಶೋಕನಗರದ ಮನೀಷ್ ಯಾನೆ ಮನೀಷ್ ರಾಮ್(20) ಮತ್ತು ದೇರಳಕಟ್ಟೆ ನಿವಾಸಿ ಅಶ್ವಿನ್ ಯಾನೆ ಅಶ್ಚಿನ್ ಕೊರಾಯೋ (22) ಬಂಧಿತ ಆರೋಪಿಗಳು.

ಆರೋಪಿಗಳು ಬೈಕ್ ಮತ್ತು ಸ್ಕೂಟರುಗಳಲ್ಲಿ ಓಡಾಡಿ, ಒಂಟಿ ಮಹಿಳೆಯರು ನಡೆದು ಹೋಗುವಾಗ ಅವರ ಬಳಿಗೆ ದಾರಿ ಕೇಳುವ ನೆಪದಲ್ಲಿ ಹೋಗಿ, ಅವರ ಕುತ್ತಿಗೆಯಿಂದ ಒಡವೆಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆ, ಕಂಕನಾಡಿ ನಗರ ಠಾಣೆ, ಮಂಗಳೂರು ಪೂರ್ವ ಠಾಣೆ, ಕಾವೂರು ಠಾಣೆ, ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಒಟ್ಟು 6 ಸರ ಸುಲಿಗೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಈ ಮೂವರು ಆರೋಪಿಗಳು ಅದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಖಚಿತಪಟ್ಟಿದೆ.

ಆರೋಪಿಗಳಿಂದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ ಸರಗಳು, ಬೈಕ್, ಸ್ಕೂಟರ್, ಮೊಬೈಲ್ ಇತ್ಯಾದಿ ಸುಮಾರು 4,57,150 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಸಮೀಪದ ಕೊಣಾಜೆ ಬಳಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.