ಉದ್ಯಮಿ ಹತ್ಯೆಗೆ ವಿಫಲ ಯತ್ನ : ಮೂವರು ಆರೋಪಿಗಳ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ನೆಲ್ಲಿಕಾಯಿ ರಸ್ತೆಯ  ಅಪಾರ್ಟಮೆಂಟಿನ ಪಾರ್ಕಿಂಗ್ ಸ್ಥಳದ ಬಳಿ  ಉದ್ಯಮಿ ಮೊಹಮ್ಮದ್ ಇಜಾಸ್ ಎಂಬವರನ್ನು ಕೊಲೆ ಮಾಡಲು ವಿಫಲ ಯತ್ನ ನಡೆಸಿದ ಮೂವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕುದ್ರೋಳಿ ನಿವಾಸಿಗಳಾದ ಅಹಮ್ಮದ್ ಶಿನಾನ್ ಯಾನೆ ಜಲೀಲ್ ಯಾನೆ ಚಿನ್ನ ಯಾನೆ ಶಿನಾನ್ (22), ಶೇಖ್ ಶಹಬಾಝ್ ಯಾನೆ ಚಾಬಾ (22) ಮತ್ತು ಅನೀಶ್ ಅಶ್ರಫ್ (19).

ಡಿ 2ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮೊಹಮ್ಮದ್ ಇಜಾಸರು ತನ್ನ ಆಕ್ಟಿವಾ ಸ್ಕೂಟರಿನಲ್ಲಿ ತಮ್ಮ ಅಪಾರ್ಟಮೆಂಟಿಗೆ  ಬಂದು  ಎಂಟ್ರನ್ಸ್ ಬಳಿ ಸ್ಕೂಟರನ್ನು ನಿಲ್ಲಿಸಿದ ವೇಳೆ ಮೂವರು ಆರೋಪಿಗಳು ಹಿಂದಿನಿಂದ ಬಂದು ತಲವಾರುಗಳಿಂದ ಕಡಿಯಲು ಯತ್ನಿಸಿದಾಗಮೊಹಮ್ಮದ್ ಇಜಾಸ್ ಜೀವ ಭಯದಿಂದ ಓಡಿದ್ದಾರೆ. ಬಳಿಕ ಬೆನ್ನಟ್ಟಿದ ಆರೋಪಿಗಳು ಅಪಾರ್ಟ್‍ಮೆಂಟಿನ ಮೆಟ್ಟಿಲ ಬಳಿ ತಲವಾರುಗಳಿಂದ ತಲೆಗೆ ಕಡಿದು, ಚೂರಿಯಿಂದ ಬೆನ್ನಿಗೆ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು.

ಡಿ 9ರಂದು ಬೆಳಿಗ್ಗೆ ಆರೋಪಿಗಳನ್ನು ಸುರತ್ಕಲ್ ಜಂಕ್ಷನ್ ಬಳಿಯಿಂದ  ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ ಆಕ್ಟಿವಾ ಸ್ಕೂಟರ್, ತಲವಾರು ಹಾಗೂ  ಚೂರಿಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಗೋವಾಕ್ಕೆ ಪರಾರಿಯಾಗಿದ್ದ ಮೂವರು ಆರೋಪಿಗಳು ಗೋವಾದಿಂದ ವಾಪಾಸ್ಸು ಮಂಗಳೂರಿಗೆ ಬರುತ್ತಿರುವುದನ್ನು ಖಚಿತ ಪಡಿಸಿದ ಪೊಲೀಸರು ಇದೀಗ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಬಂದರು ಪ್ರದೇಶದ ಬಳಿ ನಡೆದಿದ್ದ ಗಾಯಾಳು ಮೊಹಮ್ಮದ್ ಇಜಾಸ್  ಹಾಗೂ ಆರೋಪಿಗಳ ನಡುವೆ ನಡೆದ ಹಿನ್ನೆಲೆಯಲ್ಲಿ ದ್ವೇಷದಿಂದ ಆರೋಪಿಗಳು ಕೃತ್ಯ ನಡೆಸಿರುವುದೆಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯ ಪೆÇಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೆÇಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ  ಆರೋಪಿಗಳನ್ನು  ಬಂಧಿಸಿದ್ದರು.