ಸರಕಾರಿ ತೋಟದಿಂದ ಗೇರು ಬೀಜ ಕದ್ದ ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸರಕಾರಿ ತೋಟಗಾರಿಕಾ ಇಲಾಖೆಯ ಗೇರು ತೋಟದಿಂದ ಗೇರುಬೀಜ ಕಳವುಗೈಯ್ಯುತ್ತಿದ್ದ ಮೂರು ಮಂದಿಯನ್ನು ಆದೂರು ಪೆÇಲೀಸರು ಬಂಧಿಸಿದ್ದಾರೆ.

ಬದಿಯಡ್ಕ ಬಳಿಯ ನಾರಂಪಾಡಿ ನಿವಾಸಿ ಸೆಯ್ದು (26), ಕಿನ್ನಿಂಗಾರು ನಿವಾಸಿ ಅಬ್ದುಲ್ ಅಸೀಸ್ (41), ಪುತ್ತೂರು ವಡಂಬಾಡಿ ನಿವಾಸಿ ಅಬ್ದುಲ್ ಮಜೀದ್ (20) ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಾಟೆಕಲ್ಲು ಬಳಿಯ ಚಿಪ್ಪರಂಬು ಎಂಬಲ್ಲಿನ ಸರಕಾರಿ ಗೇರು ತೋಟದಿಂದ ಇವರು ಭಾನುವಾರ ಸಂಜೆ ಗೇರುಬೀಜ ಕಳವು ನಡೆಸುತ್ತಿದ್ದಾಗ ಈ ಬಗ್ಗೆ ನಾಗರಿಕರು ನೀಡಿದ ದೂರಿನಂತೆ ತೆರಳಿದ ಆದೂರು ಪೆÇಲೀಸರು ಈ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ಎರಡು ಗೋಣಿಗಳಲ್ಲಾಗಿ ತುಂಬಿಸಿಟ್ಟ 30 ಕಿಲೋ ಗೇರುಬೀಜವನ್ನು ಪೆÇಲೀಸರು ವಶಪಡಿಸಿ ಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

ಕಳೆದ ಹಲವು ದಿನಗಳಿಂದ ಬೈಕ್ ಸಹಿತ ವಾಹನಗಳಲ್ಲಿ ಬರುವ ತಂಡ ಗೇರುತೋಟದಿಂದ ಬೀಜ ಕಳವುಗೈಯ್ಯುತ್ತಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪ್ಲಾಂಟೇಶನ್ ಅಧಿಕಾರಿಗಳು ದೂರು ನೀಡಿದ್ದರು. ಜೊತೆಗೆ ನಾಗರಿಕರು ನಿಗಾ ಇರಿಸಿದ್ದು, ಇದರಂತೆ ಭಾನುವಾರ ಗೇರುಬೀಜ ಕಳವು ನಡೆಸುತ್ತಿದ್ದಾಗ ಪೆÇಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಬೀಜ ಕಳ್ಳರು ತಪ್ಪಿಸಿಕೊಳ್ಳದಂತೆ ಪೆÇಲೀಸರು ಬರುವವರೆಗೆ ಗೇರುತೋಟದ ಬಳಿ ನಾಗರಿಕರು ಕಾವಲುನಿರತರಾಗಿದ್ದರು.