ಬಜ್ಪೆ ವಿಮಾನ ನಿಲ್ದಾಣದಲ್ಲಿ 25 ಲಕ್ಷ ರೂ ಕರೆನ್ಸಿ ವಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ವಶಕ್ಕೆ ಪಡೆದುಕೊಂಡ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿ ಆರ್ ಐ) ಅಧಿಕಾರಿಗಳು 25,07,162 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳದ ನಿವಾಸಿ ಮುಹಮ್ಮದ್ ಫಾರೂಕ್ ಅರ್ಮಾರ್(51) ಎಂದು ಗುರುತಿಸಲಾಗಿದೆ. ದುಬೈಗೆ ತೆರಳಲೆಂದು ಗುರುವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬಂದಾಗ ಈತನ ಚಲನವಲನ ಕಂಡು ಶಂಕೆಗೊಂಡು ಪೊಲೀಸರು ಬ್ಯಾಗ್ ಶೋಧಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಈತನಿಂದ ಯುಎಸ್ ಡಾಲರ್ಸ್, ಬ್ರಿಟಿಷ್ ಪೌಂಡ್, ಯುರೋ, ಯುಎಇ ದಿರ್ಹಂ, ಸೌದಿ ರಿಯಾಲ್ ಮತ್ತು ಕತಾರ್ ರಿಯಾಲ್ ಕರೆನ್ಸಿಗಳನ್ನು ವಶಪಡಿಸಿಕೊಂಡಾಗಿದೆ. ಈತನ ವಿರುದ್ಧ 1962 ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅರ್ಮಾರ್ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಬೆಳಿಗ್ಗಿನ ಜಾವ ಬಂದಿದ್ದಾಗ ಡಿ ಆರ್ ಐ ಅಧಿಕಾರಿಗಳು ಆತನ ಬ್ಯಾಗನ್ನು ಶೋಧಿಸುವುತ್ತಿರುವುದು ಬೆಳಿಕಿಗೆ ಬಂದಿದೆ. ಈ ವೇಳೆ ಬ್ಯಾಗಿನಲ್ಲಿ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿ ಈ ಹಿಂದೆ ಕೂಡಾ ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಮೊಬೈಲ್ ಹಾಗೂ ಇತರ ಸೊತ್ತುಗಳನ್ನು ತೆರಿಗೆ ತಪ್ಪಿಸಿ ಊರಿಗೆ ತಂದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.