ರೈಲಿನಿಂದ 25 ಕಿಲೋ ತಂಬಾಕು ಉತ್ಪನ್ನ ವಶ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತವಾಗಿ ಸಾಗಿಸುತ್ತಿದ್ದ 25 ಕಿಲೋ ಹಾಗೂ ಇತರ 50 ಟಿನ್ ತಂಬಾಕು ಉತ್ಪನ್ನಗಳ ಸಹಿತ ಒಬ್ಬನನ್ನು ರೈಲಿನಿಂದ ಸೆರೆ ಹಿಡಿಯಲಾಗಿದೆ. ಕಾಸರಗೋಡು ರೈಲ್ವೇ ಪೆÇಲೀಸರು ಹಾಗೂ ಕಾಸರಗೋಡು ಅಬಕಾರಿ ರೇಂಜ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿ ಮಂಗಳೂರು ನಿವಾಸಿ ಅರವಿಂದ(27)ನನ್ನು ಸೆರೆಯಾದ ಆರೋಪಿ. ಮಂಗಳೂರು-ಚೆನ್ನೈ ರೈಲಿನಲ್ಲಿ ಕಾಸರಗೋಡು ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬ್ಯಾಗಿನಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪಾನ್ ಮಸಾಲ ಪತ್ತೆಯಾಗಿದೆ. 50 ಪ್ಯಾಕೆಟ್ ಹಾಗೂ 50 ಟಿನ್ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಈ ಮಾಲನ್ನು ಮಂಗಳೂರಿನಿಂದ ಕಲ್ಲಿಕೋಟೆಗೆ ಸಾಗಿಸುತ್ತಿರುವುದಾಗಿ ಆರೋಪಿ ಪೆÇಲೀಸರಲ್ಲಿ ತಿಳಿಸಿದ್ದಾನೆ. ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.