ಯಮುನಾ ನದಿಯಲ್ಲಿ ನಾವೆ ಮುಳುಗಿ 25 ಮಂದಿ ಮೃತ

ಲಕ್ನೋ : ಉತ್ತರ ಪ್ರದೇಶದ ಬಾಗಪತ್ ಪಟ್ಟಣದ ಹತ್ತಿರ ಯಮುನಾ ನದಿಯಲ್ಲಿ ಗುರುವಾರ ನಾವೆಯೊಂದು ಮುಳುಗಿದ ಭೀಕರ ದುರ್ಘಟನೆಯಲ್ಲಿ ಕನಿಷ್ಠ ಪಕ್ಷ 25 ಮಂದಿ ನೀರುಪಾಲಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಿರ್ಮಾಣ ಕಾರ್ಮಿಕರಾಗಿದ್ದಾರೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಹಲವರು ನಾಪತ್ತೆಯಾಗಿದ್ದು, ಬದುಕುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.