ಪೊಲೀಸ್ ಅಧಿಕಾರಿ ಮನೆಯಿಂದ 22 ಕಿಲೋ ಗ್ರಾಂ ಗಾಂಜಾ ವಶ

ಸಾಂದರ್ಭಿಕ ಚಿತ್ರ

ಚೆನ್ನೈ : ಇಲ್ಲಿನ ರೋಯಪುರಂನ ಪೊಲೀಸ್ ವಸತಿಗೃಹ ಪ್ರದೇಶದಲ್ಲಿರುವ ಸರ್ಕಾರಿ ನಿವಾಸವೊಂದರಿಂದ 22 ಕಿಲೋ ಗಾಂಜಾ ವಶಪಡಿಸಿಕೊಂಡಿರುವ ನಗರ ಪೊಲೀಸರು, ಫೋರ್ಟ್ ಪೊಲೀಸ್ ಠಾಣೆಗೆ ಸೇರಿದ ಆರೋಪಿ ವಿಶೇಷ ಸಬ್-ಇನಸ್ಪೆಕ್ಟರೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿ ಸುಂದರವಡಿವೇಳ್ ಆಗಿದ್ದು, ಇವರು ಫೋರ್ಟ್ ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯರು ನೀಡಿದ ಮಾಹಿತಿಯಂತೆ ಫ್ಲಾರ್ ಬಜಾರ್ ಉಪ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಪೊಲೀಸರು ಈ ದಾಳಿ ನಡೆಸಿ, ರಿಕ್ಷಾವೊಂದರಲ್ಲಿ ಇಡಲಾಗಿದ್ದ ಭಾರೀ ಪ್ರಮಾಣದ ಗಾಂಜಾ ಜಪ್ತಿ ಮಾಡಿದ್ದಾರೆ.