ಕಾಲೇಜಿನಲ್ಲಿ ಘರ್ಷಣೆ : 22 ಮಂದಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಮತ್ತು ಎಂಎಸ್ಸೆಫ್ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ ಎರಡು ತಂಡಗಳ ದೂರಿನಂತೆ ಒಟ್ಟು 22 ಮಂದಿ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಕಾಲೇಜು ವರಾಂಡದಲ್ಲಿ ಘರ್ಷಣೆ ನಡೆದಿತ್ತು. ಅಂತಿಮ ವರ್ಷ ಬಿ ಕಾಂ ವಿದ್ಯಾರ್ಥಿ ಎಬಿವಿಪಿಯ ವಿವೇಕ್ (20) ನೀಡಿದ ದೂರಿನಂತೆ ಎಂಎಸ್ಸೆಫ್ ಕಾರ್ಯಕರ್ತರಾದ ಅಸ್ಕರ್, ಕರೀಂ, ಫಯಾಜ್ ಖಾದರ್, ಅಸ್ಫಾಕ್, ಮೆಹರೂಫ್ ಸಹಿತ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಬಿಎ ವಿದ್ಯಾರ್ಥಿಯಾದ ಎಂಎಸ್ಸೆಫ್ ಕಾರ್ಯಕರ್ತ ಅಬ್ದುಲ್ ಅತ್ತಾವುಲ್ (19) ದೂರಿನಂತೆ ಎಬಿವಿಪಿ ಕಾರ್ಯಕರ್ತರಾದ ವಿವೇಕ್, ನಿಖಿಲ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ರಕ್ಷಾಬಂಧನಕ್ಕೆ ಸಂಬಂಧಿಸಿ ಉಂಟಾದ ವಿವಾದ ಘರ್ಷಣೆಗೆ ಕಾರಣವೆಂದು ಆರೋಪಿಸಲಾಗಿದೆ.