ಉಲಾಯಿ-ಪಿದಾಯಿ ಆಟದಲ್ಲಿ ನಿರತರಾಗಿದ್ದ 22 ಮಂದಿ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಗ್ರಾಮದ ಎಂ ಆರ್ ಪಿ ಎಲ್ ಕಾಲೊನಿ ಕೋಡ್ದಬ್ಬು ದೈವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಉಲಾಯಿ-ಪಿದಾಯಿ ಜುಗಾರಿ ಆಟದಲ್ಲಿ ನಿರತರಾಗಿದ್ದ 22 ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತರಿಂದ ಆಟಕ್ಕೆ ಬಳಸಿಕೊಂಡಿದ್ದ 12,365 ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸರು ತೆರಳಿದಾಗ ಆರೋಪಿಗಳು ರಾತ್ರಿ 1.15ಕ್ಕೆ ನಗದು ಹಣವನ್ನು ಪಣವಾಗಿಟ್ಟುಕೊಂಡು ಕ್ಯಾಂಡಲ್ ಬೆಳಕಿನಲ್ಲಿ ಆಟದಲ್ಲಿ ನಿರತರಾಗಿದ್ದರು. ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.