2008ರ ಭಯೋತ್ಪಾದನೆ ಕೃತ್ಯ ಸಾಬೀತು

ಮೂವರು ಅಪರಾಧಿಗಳು, ನಾಲ್ವರು ದೋಷಮುಕ್ತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಂಕಿತ ಭಯೋತ್ಪಾದಕ ಚಟುವಟಿಕೆಯ ಆರೋಪದಲ್ಲಿ 2008ರಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ ಮೂವರನ್ನು ಅಪರಾಧಿಗಳೆಂದು ಘೋಷಿಸಿ, ನಾಲ್ವರನ್ನು ನಿರಪರಾಧಿಗಳೆಂದು ದೋಷಮುಕ್ತಗೊಳಿಸಿದೆ. ಶಿಕ್ಷೆ ಪ್ರಮಾಣದ ತೀರ್ಪನ್ನು ಎ 12ರಂದು ಘೋಷಿಸಲಿದೆ.

ಸುಭಾಷ್ ನಗರ ನಿವಾಸಿ ಸೈಯ್ಯದ್ ಮಹಮ್ಮದ್ ನೌಶಾದ್ (25), ಹಳೆಯಂಗಡಿ ನಿವಾಸಿ ಅಹಮ್ಮದ್ ಬಾವ ಅಬೂಬಕ್ಕರ್(33) ಮತ್ತು ಉಚ್ಚಿಲ ನಿವಾಸಿ ಫಕೀರ್ ಅಹಮ್ಮದ್(46)ಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ ತೀರ್ಪು ಪ್ರಕಟಿಸಿದರು. ಪ್ರಕರಣದಲ್ಲಿ ಉಳ್ಳಾಲದ ಮುಹಮ್ಮದ್ ಆಲಿ (45), ಅವರ ಪುತ್ರ ಜಾವೆದ್ ಆಲಿ(20), ಬಂಟ್ವಾಳ ನಿವಾಸಿ ಮಹಮ್ಮದ್ ರಫೀಕ್ (26) ಮತ್ತು ಭಟ್ಕಳದ ಮಹಮ್ಮದ್ ಶಬೀರ್(27)ನನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ.