ಬಾಲಕಿ ಅತ್ಯಾಚಾರಗೈದು ಕೊಲೆಗೈದ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ

ಮೈಸೂರು : ಎರಡೂವರೆ ವರ್ಷದ ಹಿಂದೆ ಎರಡು ವರ್ಷದ ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿದ್ದ ಹಂತಕ ಚಿಕ್ಕಪ್ಪಗೆ ಸ್ಥಳೀಯ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೇಟಹಳ್ಳಿಗೆ ಹತ್ತಿರದ ಅಂಬೇಡ್ಕರ್ ನಗರದ ನಿವಾಸಿ ಸದ್ದಾಂ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆಗೈದ ಅಪರಾಧಿ. ಈತ 2015 ಆಗಸ್ಟ್ 30ರಂದು ಇದೇ ಪ್ರದೇಶದ ಬಾಲಕಿಯ ಮೇಲೆ ದುಷ್ಕøತ್ಯವೆಸಗಿದ್ದ. ಮರುದಿನವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇಲ್ಲಿನ ಆರನೇ ಎಜೆಡಿ ನ್ಯಾಯಾಲಯದಲ್ಲಿ ಎರಡು ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಮೃತ ಬಾಲಕಿಯ ತಂದೆ ಅನಾರೋಗ್ಯ ಪೀಡಿತರಾಗಿದ್ದ ಕಾರಣ ಮಗುವನ್ನು ಮಾಳದಲ್ಲಿರುವ ತನ್ನ ಪತ್ನಿಯ ಸಹೋದರಿಯ ಮನೆಯಲ್ಲಿ ಎರಡು ದಿನದ ಮಟ್ಟಿಗೆ ಬಿಟ್ಟಿದ್ದರು. ಘಟನೆ ನಡೆದ ದಿನ ರಾತ್ರಿ ಮನೆಗೆ ಬಂದಿದ್ದ ಸದ್ದಾಂ, ಬಾಲಕಿಗೆ ಚಾಕಲೇಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿ, ಮನೆಗೆ ಹತ್ತಿರದ ಪಾಳು ಕಟ್ಟಡವೊಂದರಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಆ ವೇಳೆ ಮಗು ಜೋರಾಗಿ ಬೊಬ್ಬಿಟ್ಟಿದ್ದು, ಕೋಪಗೊಂಡ ಆತ ಮಗುವಿನ ಮುಖಕ್ಕೆ ಹೊಡೆದಿದ್ದ. ಪರಿಣಾಮ ಆಕೆಯ ಮೂಗಿನಲ್ಲಿ ರಸ್ತಸ್ರಾವವಾಗಿತ್ತು. ನಂತರ ಮಗುವನ್ನು ಮನೆಗೆ ತಂದು ಬಿಟ್ಟಿದ್ದ. ನೋವು ತಡೆಯಲಾರದೆ ಮಗು ರಾತ್ರಿ ಮೃತಪಟ್ಟಿದೆ. ಬಳಿಕ ರಿಕ್ಷಾದಲ್ಲಿ ಶವ ಸಾಗಿಸಲು ಪ್ರಯತ್ನಿಸಿದಾಗ ನೆರೆಮನೆಯವರು ಶಂಕೆಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೇಟಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಸೆರೆ ಹಿಡಿದಿದ್ದರು. ವಿಚಾರಣೆ ನಡೆಸಿದಾಗ ಅತ್ಯಾಚಾರ ವಿಷಯ ಬೆಳಕಿಗೆ ಬಂದಿದೆ. ಎನ್ ಎರ್ ಪೊಲೀಸರು ವಿಸ್ತøತ ತನಿಖೆ ನಡೆಸಿ ಕೋರ್ಟಿಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

LEAVE A REPLY