ಪಾಕ್ ಮಾರುಕಟ್ಟೆಯಲ್ಲಿ ಸ್ಫೋಟ : 20 ಜನ ಬಲಿ

 ಪೇಶಾವರ :  ವಾಯುವ್ಯ ಪಾಕಿಸ್ತಾನದ ಕುರ್ರಂ ಏಜನ್ಸಿಯ ಜನನಿಬಿಡ ಈದ್ಗಾ ಬಜಾರಿನ ತರಕಾರಿ ಮಾರುಕಟ್ಟೆಯೊಂದರಲ್ಲಿ  ಶನಿವಾರ ನಡೆದ ಪ್ರಬಲ ಸ್ಫೋಟವೊಂದರಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಸ್ಫೋಟ ಸಂಭವಿಸಿದ ಸ್ಥಳ ಅಫ್ಗಾನ್ ಗಡಿಗೆ ಸಮೀಪವಿದೆ. ತರಕಾರಿ ತುಂಬಿದ ಬುಟ್ಟಿಯೊಂದರಲ್ಲಿರಿಸಲಾಗಿದ ಸ್ಫೋಟಕವೊಂದು ತರಕಾರಿಗಳ  ಹರಾಜು ನಡೆಯುತ್ತಿದ್ದ ವೇಳೆ ಸ್ಫೋಟಗೊಂಡಿತೆಂದು ಹೇಳಲಾಗಿದೆ.