20 ಮಂದಿ ಆಸ್ಪತ್ರೆಗೆ

ಸುಳ್ಯ ಪಾಲಡ್ಕದಲ್ಲಿ ಬಸ್ ಮುಖಾಮುಖಿ

ಸುಳ್ಯ : ಬಸ್ಸುಗಳೆರಡು ಪರಸ್ಪರ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ನಡೆದಿದ್ದು, 20 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯ ತಾಲೂಕು ಆಸ್ಪತ್ರೆ ಮತ್ತು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೆ ಎಸ್ ಆರ್ ಟಿ ಸಿ ಐರಾವತ ಬಸ್ ಮತ್ತು ಖಾಸಗಿ ಬಸ್ ನಡುವೆ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಐರಾವತ ಬಸ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರೆ, ಖಾಸಗಿ ಬಸ್ ಮಡಿಕೇರಿಯಿಂದ ಕಾಸರಗೋಡಿಗೆ ಹೋಗುತ್ತಿತ್ತು.

ಗಾಯಾಳುಗಳನ್ನು ವಿಕ್ಟರ್ ಕ್ರಾಸ್ತಾ (42), ವಿಶಾಲ್ (36), ಸತೀಶ (27), ಅಯಿಷಾ (31), ರಾಘವ (58), ರಾಜ (28), ಪಾರ್ವತಿ (30), ಹೊನ್ನಪ್ಪ (51), ರಮೇಶ (22), ಪೂಜಾ (23), ಶಂಕರರಾಜ ಭಟ್ (45), ಪರ್ವೀಸ್ (37), ಜಯಂತ್ (21), ಅಣ್ಣು (52), ವಾಸುದೇವ (46), ಕುಸುಮಾ (50), ಚಂದ್ರಶೇಖರ (41), ಸಿನಾನ್ (10), ಖತೀಜಮ್ಮ (77), ಫೌಝಿಯಾ (37) ಎಂದು ಗುರುತಿಸಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.