ಸಿಪಿಎಂ ಕಚೇರಿಗೆ ನುಗ್ಗಿದ 20 ಬಿಜೆಪಿಗರ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಿಪಿಎಂ ಬೆಳ್ಳಿಪ್ಪಾಡಿ ಬ್ರಾಂಚ್ ಸಮಿತಿ ಕಚೇರಿ ನುಗ್ಗಿ ದಾಂದಲೆ ಮಾಡಿದ ಆರೋಪದಂತೆ 20 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಆದೂರು ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ಉಮೇಶ, ದೀಪಕ್, ಸುಜಿತ್ ಸಹಿತ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕಚೇರಿಯ ಬಾಗಿಲು ಮುರಿದು ಒಳಗಿದ್ದ ಪೀಠೋಪಕರಣ ಹಾಗೂ ದಾಖಲೆ ಪತ್ರಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ಧ್ವಜತೋರಣಗಳಿಗೆ ಬೆಂಕಿ ಹಚ್ಚಿರುವುದಾಗಿ ಬ್ರಾಂಚ್ ಕಾರ್ಯದರ್ಶಿ ಸಂಜೀವ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.