ಆರು ರಾಜ್ಯಗಳ 20.3 ಲಕ್ಷ ಕೋರ್ಟ್ ಪ್ರಕರಣ ನೆನೆಗುದಿಗೆ

ಸಾಂದರ್ಭಿಕ ಚಿತ್ರ

ನವದೆಹಲಿ : ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದಲ್ಲಿ ಕಳೆದ ಒಂದು ದಶಕದಷ್ಟು ಹಳೆಯದಾದ 20.3 ಲಕ್ಷ (ಶೇ 84) ಪ್ರಕರಣಗಳು ಕೆಳ ಕೋರ್ಟುಗಳಲ್ಲಿ ನೆನೆಗುದಿಗೆ ಬಿದ್ದಿವೆ ಎಂದು ಕಾನೂನು ಸಚಿವಾಲಯದ ಇತ್ತೀಚಿನ ಅಂಕಿಅಂಶವೊಂದು ಹೇಳಿದೆ.

ಸಂಸತ್ತಿನ ಕಾನೂನು ಸಚಿವಾಲಯದ ನ್ಯಾಯಿಕ ಇಲಾಖೆಯಿಂದ ಪಡೆಯಲಾಗಿರುವ ಡಾಟಾದ ಪ್ರಕಾರ, ಕಳೆದ 10 ವರ್ಷದಿಂದ 2015 ಡಿಸೆಂಬರ್ 31ರವರೆಗೆ ಇಷ್ಟೊಂದು ಪ್ರಕರಣಗಳು ವಿಭಿನ್ನ ಜಿಲ್ಲಾ ಮತ್ತು ಕೆಳಗಿನ ಕೋರ್ಟುಗಳಲ್ಲಿ ವಿಚಾರಣೆಯಾಗದೆ ಕೊಳೆಯುತ್ತಿವೆ.

ಇದರಲ್ಲಿ ಶೇ 70ರಷ್ಟು ಕ್ರಿಮಿನಲ್ ಪ್ರಕರಣ ಹಾಗೂ ಉಳಿದವು ಸಿವಿಲ್ ಕೇಸುಗಳಾಗಿವೆ. ದೇಶದ ಜಿಲ್ಲಾ ಕೋರ್ಟುಗಳಲ್ಲಿ ಬಾಕಿಯಾಗಿರುವ ಪ್ರಕರಣಗಳ ಡಾಟಾ ತಿಳಿದುಕೊಳ್ಳಲು ಸುಪ್ರೀಂ ಕೋರ್ಟಿನ ಇ-ಸಮಿತಿ ರಾಷ್ಟ್ರೀಯ ನ್ಯಾಯಿಕ ಡಾಟಾ ಗ್ರಿಡ್ ಆರಂಭಿಸಿದೆ. ಡಾಟಾದಲ್ಲಿ ಕ್ರಿಮಿನಲ್ ಮತ್ತು ನಾಗರಿಕ ಪ್ರಕರಣ ಪ್ರತ್ಯೇಕಗೊಳಿಸಲಾಗಿದೆ.