ಕಪ್ಪೆಗಳ ಸಂರಕ್ಷಣೆ ಬಗ್ಗೆ ಕಿರು ಚಿತ್ರ ನಿರ್ಮಿಸುತ್ತಿರುವ ಉತ್ಸಾಹಿ ತರುಣರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಶ್ಚಿಮ ಘಟ್ಟದಲ್ಲಿ ಹೊಸ ಜಾತಿಯ ಕಪ್ಪೆಯೊಂದನ್ನು ಪತ್ತೆ ಹಚ್ಚಿರುವ ಧೀರಜ್ ಐತಾಳ್ (30) ಹಾಗೂ ಪ್ರದೀಪ್ ಹೆಗ್ಡೆ (23) ಎಂಬ ಇಬ್ಬರು ಉತ್ಸಾಹಿ ತರುಣರು ಕಪ್ಪೆಗಳ ಸಂರಕ್ಷಣೆಯ ಮಹತ್ವವನ್ನು ಸಾರುವ ಕಿರುಚಿತ್ರ `ದಿ ಲಾಸ್ ಹಾಪ್(ಇ)’ ನಿರ್ಮಿಸಲು ಉದ್ದೇಶಿಸಿದ್ದಾರೆ. ಕಪ್ಪೆಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟ ಹಾಗೂ ಅವುಗಳು ಎದುರಿಸುತ್ತಿರುವ ಅಪಾಯಗಳನ್ನು ಈ ಚಿತ್ರ ವಿವರಿಸಲಿದೆ.

ಆದರೆ ಚಿತ್ರ ನಿರ್ಮಾಣಕ್ಕಾಗಿ ಹಣಕಾಸಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರು ಈಗ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಲು ಉದ್ದೇಶಿಸಿದ್ದಾರೆ. “ವನ್ಯಜೀವಿಗಳ ಬಗ್ಗೆ ಚಿತ್ರ ನಿರ್ಮಿಸುವುದು ಕಷ್ಟದ ಕೆಲಸ. ಚಿತ್ರೀಕರಣ ಕೂಡ ಕಠಿಣ ಕಾರ್ಯವಾಗಿತ್ತು. ಕಳೆದ ವರ್ಷ ಕೆಲ ಸ್ನೇಹಿತರು ನೀಡಿದ ದೇಣಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿತ್ತು” ಎಂದಿದ್ದಾರೆ.