ಈಜಲು ಹೋದವರ ದುರ್ಮರಣ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : ತಾಲೂಕಿನ ಬಾಸಲದ ಸಮೀಪದ ಕಾನೂರು ಜಲಪಾತಕ್ಕೆ ಈಜಲು ಹೋದ ಯುವಕರಿಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ.

ಪಟ್ಟಣದ ಕಾಳಮ್ಮನಗರದ ಕಿಗನ್ ಫರ್ನಾಂಡೀಸ್ ಹಾಗೂ ಗಣಪತಿಗಲ್ಲಿಯ ಶೀಲವಂತ ಫರ್ನಾಂಡೀಸ್ ಮೃತಪಟ್ಟವರು. ಕಾನೂರು ಜಲಪಾತಕ್ಕೆ ಪಿಕ್ನಿಕ್ಕಿಗೆಂದು ಹೋದವರು ನೀರಿನ ಗುಂಡಿಯಲ್ಲಿ ಈಜಲು ತೆರಳಿ ಮೇಲಕ್ಕೆ ಬರಲಾಗದೇ ನೀರಿನಲ್ಲಿ ಮುಳುಗಿದ್ದಾರೆ. ಮಂಗಳವಾರ ನೀರಿನಿಂದ ಶವ ಹೊರಕ್ಕೆ ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.