ವಧುವಿನ ಬಗ್ಗೆ ಚಾಡಿ ಮಾತು ವಿಚಾರಿಸಿದ್ದಕ್ಕೆ ಕತ್ತಿಯಿಂದ ಕಡಿದ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ವಿವಾಹ ನಿಗದಿಯಾಗಿದ್ದ ಯುವತಿ ಮತ್ತು ಆಕೆಯ ತಾಯಿಗೆ ನೆರಮನೆ ಯುವಕನೋರ್ವ ಕತ್ತಿಯಿಂದ ಕಡಿದು ಪರಾರಿಯಾದ ಘಟನೆ ಗುತ್ತಿಗಾರಿನ ಚೈಪೆ ಎಂಬಲ್ಲಿ ನಡೆದಿದೆ. ಬಾಕಿಲ ಮನೆಯ ಕುಸುಮ ನಾಯ್ಕ ಮತ್ತು ಅವರ ಪುತ್ರಿ ಕವಿತಾ ಎಂಬವರಿಗೆ ಹೊಸೊಳಿಕೆ ನಿವಾಸಿ ರವಿ ಟೈಲರ್ ಎಂಬಾತ ಕತ್ತಿಯಿಂದ ಕಡಿದು ಪರಾರಿಯಾದನೆನ್ನಲಾಗಿದೆ.

ಗುತ್ತಿಗಾರಿನ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗದಲ್ಲಿರುವ ಕವಿತಾಳಿಗೆ ಮೇ18ಕ್ಕೆ ಮದುವೆ ನಿಶ್ಚಯವಾಗಿತ್ತು. ಕವಿತಾಳನ್ನು ಮದುವೆಯಾಗುವ ವರನ ಕಡೆಯವರಿಗೆ ಕವಿತಾಳ ಬಗ್ಗೆ ಯಾರೋ ತಪ್ಪು ಅಭಿಪ್ರಾಯ ನೀಡಿದ ಬಗ್ಗೆ ವರನ ಮನೆಯವರು ಯುವತಿಯ ಮನೆಗೆ ಬಂದು ಮಾತುಕತೆ ನಡೆಸಿದ್ದರು.

ರವಿಯೇ ಚಾಡಿ ಮಾತು ಹೇಳಿರಬೇಕೆಂದು ಭಾವಿಸಿ ಕವಿತಾಳ ತಾಯಿ ರವಿಗೆ ಫೆÇೀನ್ ಮಾಡಿ ವಿಚಾರಿಸಿದ್ದರು. ಇದರಿಂದ ಕೋಪಗೊಂಡ ರವಿ ಏಕಾ ಏಕಿ ಕವಿತಾಳ ಮನೆಗೆ ನುಗ್ಗಿ ಕವಿತಾ ಮತ್ತು ಆಕೆಯ ತಾಯಿಯ ಮೇಲೆ

ಕತ್ತಿಯಿಂದ ಕೈ, ಕಾಲು ಮತ್ತು ಕುತ್ತಿಗೆಗೆ ಕಡಿದು ಹಲ್ಲೆ ನಡೆಸಿ ಪರಾರಿಯಾದನೆನ್ನಲಾಗಿದೆ. ಈ ಸಂದರ್ಭದಲ್ಲಿ ರಕ್ಷಣೆಗೆ ಆಗಮಿಸಿದ ಜನಾರ್ಧನ ನಾಯ್ಕನಿಗೂ ತರಚು ಗಾಯಗಳಾಗಿವೆ.

ಗಾಯಾಳುಗಳನ್ನು ನೆರೆ ಹೊರೆಯವರು ಸುಳ್ಯ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೆÇಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದು ಆರೋಪಿ ರವಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.