ಅನಧಿಕೃತ ಮರಳು ಸಾಗಾಟ : 2 ಟಿಪ್ಪರ್ ವಶಕ್ಕೆ, ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಮಂಜೇಶ್ವರ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಒಬ್ಬನನ್ನು ಸೆರೆ ಹಿಡಿಯಲಾಗಿದೆ. ತಲಪಾಡಿಯಿಂದ ಹೊಸಂಗಡಿ ಕಡೆಗೆ ಆಗಮಿಸುತ್ತಿದ್ದ ಮರಳು ಲಾರಿಗಳನ್ನು ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಿಂದ ವಶಕ್ಕೆ ಪಡೆಯಲಾಗಿದೆ. ಚಾಲಕ ಪರಾರಿಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಇನ್ನೊಂದು ಮರಳು ಲಾರಿಯನ್ನು ಉದ್ಯಾವರದಿಂದಲೇ ವಶಕ್ಕೆ ಪಡೆದಿದ್ದು, ಈ ಸಂಬಂಧ ಚಾಲಕ ವರ್ಕಾಡಿ ಬಟ್ಯಡ್ಕ ನಿವಾಸಿ ಹಮೀದ(29)ನನ್ನು ಪೆÇಲೀಸರು ಸೆರೆ ಹಿಡಿದಿದ್ದಾರೆ. ಎರಡೂ ಲಾರಿಗಳು ಕರ್ನಾಟಕ ನೋಂದಾವಣೆಯಾಗಿದ್ದು, ಚಾಲಕರ ವಿರುದ್ಧ ಮರಳು ಕಳವು ಕೇಸು ದಾಖಲಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ.