ಆರರ ಬಾಲಕಿಯ ಅತ್ಯಾಚಾರಗೈದ ಇಬ್ಬರು ಸರ್ಕಾರಿ ಶಾಲಾ ಸಿಬ್ಬಂದಿ

ಸಾಂದರ್ಭಿಕ ಚಿತ್ರ

ಜೈಪುರ : ರಾಜಸ್ತಾನದ ಬರ್ಮೇರ್ ಜಿಲ್ಲೆಯ ಪ್ರಸಿದ್ಧ ಸರ್ಕಾರಿ ಶಾಲೆಯೊಂದರ ಸ್ವಚ್ಚತಾ ಸಿಬ್ಬಂದಿಗಳಿಬ್ಬರು ಮೊನ್ನೆ ಆರು ವರ್ಷದ ಬಾಲಕಿಯ ಅತ್ಯಾಚಾರಗೈದ ಹೇಯ ಕೃತ್ಯವೊಂದು ನಡೆದಿದೆ ಎಂದು ಪೊಲೀಸರು ನಿನ್ನೆ ತಿಳಿಸಿದ್ದಾರೆ.ಬಾಲಕಿಯ ಪಾಲಕರು ನೀಡಿದ ದೂರಿನಂತೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನುಗಳು ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿದ್ದಾರೆಂದು ಬರ್ಮೇರ್ ಎಸ್ಪಿ ಗಂಗಾದೀಪ್ ಸಿಂಗ್ಲಾ ಹೇಳಿದರು.