ಟ್ರ್ಯಾಕ್ಟರ್ ಡಿಕ್ಕಿ : ಬೈಕ್ ಸವಾರರಿಗೆ ಗಂಭೀರ ಗಾಯ

ಅಪಘಾತದಲ್ಲಿ ಗಾಯಗೊಂಡವರು

ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ತಾಲೂಕಿನ ಗಣೇಶಪುರ ಬಸ್ಟ್ಯಾಂಡ್ ಹತ್ತಿರ ಬುಧವಾರ ಸಂಜೆ ಬೈಕಿಗೆ ಟ್ರ್ಯಾಕ್ಟರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ.

16mud1.A

ತಾಲೂಕಿನ ಅಟ್ಟಣಗಿ ಗ್ರಾಮದ ನಿವಾಸಿಗಳಾದ ಹನಮಂತ ಬುಗಳಿಕಟ್ಟಿ, ಸುರೇಶ ವಡ್ಡರ ಎಂಬುವವರೇ ಗಾಯಗೊಂಡವರು. ಪಟ್ಟಣದ ಹೊಂಡಾ ಶೋರೂಂನಲ್ಲಿ ಬೈಕÀನ್ನು ಸರ್ವಿಸ್ ಮಾಡಿಕೊಂಡು ಮುಂಡಗೋಡ ಕಡೆಯಿಂದ ತಮ್ಮೂರಿಗೆ ಹೋಗುವ ದಾರಿಯ ಗಣೇಶಪುರ ಹತ್ತಿರ ಇವರ ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ಪರಿಣಾಮ ಬೈಕಿನಲ್ಲಿದ್ದ ಸವಾರರಿಗೆ ತಲೆಗೆ ಮತ್ತು ಮೊಣಕಾಲಿಗೆ ಗಂಭೀರ ಗಾಯವಾಗಿದೆ.

ಗಾಯಾಳುವನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.