ಪಣಂಬೂರು ಠಾಣೆಯ ಇಬ್ಬರು ಪೇದೆ ಅಮಾನತು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಚಾರಣೆ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಂದ ಪೊಲೀಸ್ ಪೇದೆಗಳಿಬ್ಬರು ಮಹಿಳೆಯೊಬ್ಬರ ಮೊಬೈಲ್ ನಂಬರ್ ಪಡೆದುಕೊಂಡು ಆಕೆಗೆ ಪ್ರತಿನಿತ್ಯ ಕರೆ ಮಾಡಿ ಬೆದರಿಕೆ ಹಾಕಿ ಲೈಂಗಿಕವಾಗಿ ಪೀಡಿಸತೊಡಗಿದ ಘಟನೆ ಬೆಳಕಿಗೆ ಬಂದಿದೆ. ಇದೀಗ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಪಣಂಬೂರು ಪೊಲೀಸ್ ಠಾಣೆಯ ವಿನಯಕುಮಾರ್ ಮತ್ತು ರಶೀದ್ ಎಂಬ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿದ್ದಾರೆ.