ಎಬಿವಿಪಿ ಕಾರ್ಯಕರ್ತೆಗೆ ಹಲ್ಲೆ : ಇಬ್ಬರು ಎಂಎಸ್ಸೆಫ್ ಯುವಕರರ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯನ್ನು ತಡೆದು ಹಲ್ಲೆಗೈದ ಸಂಬಂಧ ಕಾಲೇಜಿನ ತೃತೀಯ ವರ್ಷದ ಬಿಎ ಕನ್ನಡ ವಿದ್ಯಾರ್ಥಿನಿ ಎಬಿವಿಪಿಯ ಶ್ವೇತಾ (20) ಎಂಬಾಕೆಯ ದೂರಿನಂತೆ ಎಂಎಸ್ಸೆಫ್ ಕಾರ್ಯಕರ್ತರಾದ ನೌಸಿಕ್ ಹಾಗೂ ಅಸ್ಕರ್ ಎಂಬವರ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆದು ಹಲ್ಲೆಗೈದಿರುವುದಾಗಿ ದೂರಲಾಗಿದೆ. ಬುಧವಾರ ಮಧ್ಯಾಹ್ನ ಎಬಿವಿಪಿ ಮತ್ತು ಎಂಎಸ್ಸೆಫ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿತ್ತು. ರಕ್ಷಾಬಂಧನಕ್ಕೆ ಸಂಬಂಧಿಸಿದ ವಿವಾದ ಘರ್ಷಣೆಗೆ ಕಾರಣವೆನ್ನಲಾಗಿದೆ. ಪ್ರಕರಣದಲ್ಲಿ ಎರಡು ತಂಡಗಳ ದೂರಿನಂತೆ ಒಟ್ಟು 22 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಬುಧವಾರ ನಡೆದ ಘರ್ಷಣೆಯ ಸಂಬಂಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಎಂಎಸ್ಸೆಫ್ ಕಾರ್ಯಕರ್ತರು ತಡೆದಿರುವುದು ಮತ್ತೆ ಘರ್ಷಣೆಗೆ ಕಾರಣವೆಂದು ದೂರಲಾಗಿದೆ.