ಚಿಟ್ ಫಂಡ್ ಮಾಲಕಗೆ ಹಲ್ಲೆ ಪ್ರಕರಣದ ಇನ್ನಿಬ್ಬರ ಬಂಧನ

ಸಾಂದರ್ಭಿಕ ಚಿತ್ರ

ಪುತ್ತೂರು : ಚಿಟ್ ಫಂಡ್ ಹಣಕಾಸು ವಿಚಾರದಲ್ಲಿ ಚರಣ್ ರಾಜ್ ಎಂಬವರಿಗೆ ಹಲ್ಲೆ ನಡೆಸಿದ ಇನ್ನಿಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.

ಮನೀಶ್ ಕುಮಾರ್ ಹಾಗೂ ಪ್ರೀತಂ ಸಂಪ್ಯ ಎಂಬವರನ್ನು ಬಂಧಿಸಲಾಗಿದೆ. ಗ್ರಾಮಾಂತರ ಪೆÇಲೀಸರು ರೌಂಡ್ಸಿಗೆ ತೆರಳುವ ಹೊತ್ತಿನಲ್ಲಿ ಆರೋಪಿಗಳು ಮಡಿಕೇರಿಗೆ ತೆರಳಲು ಕಲ್ಲರ್ಪೆ ಬಸ್ ನಿಲ್ದಾಣ ಬಳಿ ನಿಂತಿದ್ದರು. ಇದೇ ಸಂದರ್ಭ ಆರೋಪಿಗಳಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿಟ್ ಫಂಡಿನಲ್ಲಿ ನಾಲ್ಕು ಲಕ್ಷ ರೂ ಹಣ ಪಡೆದಿದ್ದ ಪ್ರಮುಖ ಆರೋಪಿ ಕಿಶೋರ್ ಕುಮಾರ್, ಹಣ ಹಿಂದಿರುಗಿಸಿರಲಿಲ್ಲ. ಆದ್ದರಿಂದ ಚರಣ್ ರಾಜ್ ನೊಟೀಸ್ ಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಚರಣ್ ರಾಜ್ ಎಂಬವರಿಗೆ ತಂಡದೊಂದಿಗೆ ಬಂದು ಸೋಮವಾರ ರಾತ್ರಿ ಹಲ್ಲೆ ನಡೆಸಲಾಗಿತ್ತು. ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಇದೀಗ ಇನ್ನಿಬ್ಬರನ್ನು ಬಂಧಿಸಲಾಗಿದೆ

LEAVE A REPLY