ಮಕ್ಕಳ ಕಿಡ್ನಾಪ್ : ಇಬ್ಬರ ಹತ್ಯೆ

ಜಮ್ಶೆಡ್ಪುರ (ಝಾರ್ಖಂಡ) : ಇಲ್ಲಿ ಮಕ್ಕಳನ್ನು ಅಪಹರಿಸುವ ಗ್ಯಾಂಗುಗಳು ಸಕ್ರಿಯಗೊಂಡಿವೆ ಎಂಬ ವದಂತಿ ಹರಡಿದ ಕಳೆದ 24 ಗಂಟೆಗಳ ಅವಧಿಯಲ್ಲಿ ಉದಿಕ್ತ ಗುಂಪುಗಳ ನಡೆಸಿದ ಎರಡು ದಾಳಿಗಳಲ್ಲಿ ಇಬ್ಬರು ಥಳಿತಕ್ಕೊಳಗಾಗಿ ಮೃಪಟ್ಟಿದ್ದಾರೆ. ಈ ಅಮಾಯಕರಿಬ್ಬರು ಇತರ ಏಳು ಮಂದಿಯೊಂದಿಗೆ ಸ್ವಚ್ಚ ಭಾರತ ಆಂದೋಲನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗುಂಪು ದಾಳಿ ಮಾಡಿದೆ. “ಈ ವದಂತಿ ಎಲ್ಲಿಂದ ಮತ್ತು ಹೇಗೆ ಹರಡಿತು ಎಂಬುದು ನಮಗೆ ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ” ಎಂದು ಡಿಐಜಿ ಪಭಾತ್ ಕುಮಾರ್ ತಿಳಿಸಿದ್ದಾರೆ. ಆದಿವಾಸಿ ಸಮುದಾಯದವರೇ ಈ ಪ್ರಕರಣಗಳಲ್ಲಿ ಒಳಗೊಂಡಿದ್ದಾರೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.