ಅಡಕೆ ಕಳವು ಪ್ರಕರಣ : ಇಬ್ಬರಿಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಅಡಕೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರಿಗೆ ಬೆಳ್ತಂಗಡಿಯ ಪ್ರಧಾನ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿ ಕಳಿಯ ಗ್ರಾಮದ ಮಲವೂರು ಮನೆ ಎಂ ಅಹಮದ್ ಕುಂಞÂ ಅವರ ಅಂಗಡಿಯಿಂದ ಅಡಿಕೆ ಕಳ್ಳತನವಾಗಿತ್ತು. ಪಿಲಿಗೂಡಿನ ಮಹಮ್ಮದ್ ನೌಷದ್, ಅಲಾದಿಕೊಟ್ಟಿಗೆ ಇರ್ಷಾದ್ ಅವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಇಬ್ಬರಿಗೂ 1 ವರ್ಷದ ಸಾದಾಜೈಲು ಸಜೆ, 1 ಸಾವಿರ ರೂ ದಂಡ, ದಂಡತೆರಲು ತಪ್ಪಿದರೆ 1 ತಿಂಗಳ ಸಜೆ ವಿಧಿಸಲಾಗಿದೆ. ಇವರು 10 ಸಾವಿರ ರೂಪಾಯಿ ಬೆಲೆಯ 43 ಕೇಜಿ ಪಠೋರಾ, 27.5 ಕೇಜಿ ಕರಿಗೋಟು ಅಡಿಕೆಯನ್ನು ಕದ್ದಿದ್ದರು. ಈ ಬಗ್ಗೆ ಬೆಳ್ತಂಗಡಿ ಪೆÇಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.