ವಾಹನ ಅಪಘಾತ ಇಬ್ಬರು ಆಸ್ಪತ್ರೆಗೆ

ಆಸ್ಪತ್ರೆಯಲ್ಲಿ ಗಾಯಾಳುಗಳು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪಾದಚಾರಿಗೆ ಡಿಕ್ಕಿ ಹೊಡೆದು ಬೈಕ್ ಮಗುಚಿದ ಅಪಘಾತದಲ್ಲಿ ಇಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೈಕ್ ಪ್ರಯಾಣಿಕ ಬಂದ್ಯೋಡ್ ಪರಿಸರವಾಸಿ ಮೊಹಮ್ಮದ್ ಶಫೀಕ್ (20) ಹಾಗೂ ಪಾದಚಾರಿ ರಾಜಸ್ತಾನ್ ನಿವಾಸಿ ಜೋರ್ಷನ್ (29) ಅಪಘಾತದಿಂದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂದ್ಯೋಡ್ ಮುಟ್ಟಂ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.