ಬುಲ್ಲೆಟಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ-ಖಂಡಿಗೆ ಜಂಕ್ಷನ್ ಬಳಿ ಕಾರೊಂದು ಬುಲ್ಲೆಟಿಗೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.

ಚೇಳಾರು-ಖಂಡಿಗೆ ಒಳರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಬುಲ್ಲೆಟಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭ ಬುಲ್ಲೆಟಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತ ತಪ್ಪಿಸಲು ಕಾರು ಚಾಲಕ ಪ್ರಯತ್ನಿಸಿದ್ದು, ಕಾರು ಡಿವೈಡರ್ ಮೇಲೆ ಹೋಗಿ ನಿಂತಿದೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಕಾರು ಗುದ್ದಿ ಸೈಕಲ್ ಸವಾರ ಬಾಲಕ ಮೃತ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಓವರ್ಟೇಕ್ ಭರಾಟೆಯಲ್ಲಿ ಕಾರೊಂದು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಬಾಲಕ ಸಾವನ್ನಪ್ಪಿದ್ದಾನೆ.

ಕೌಶಿಕ್ ತನ್ನ ಸೈಕಲನ್ನು ಚಲಾಯಿಸಿಕೊಂಡು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆಯ ಸರಕಾರಿ ಬಾಲಕಿಯರ ಹಾಸ್ಟೆಲ್ ಬಳಿ ಹೋಗುತ್ತಿದ್ದ ವೇಳೆ ದೇವರಾಜ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಮಾರುತಿ ಈಕೋ ಕಾರು ಓವರ್ಟೇಕ್ ಭರಾಟೆಯಲ್ಲಿ ಸೈಕಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸೈಕಲ್ ಸವಾರ ಕೌಶಿಕ್ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  ಅಪಘಾತಕ್ಕೆ ಕಾರಣನಾದ ಚಾಲಕ ದೇವರಾಜ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.