ಲಾರಿ -ಓಮ್ನಿ ಡಿಕ್ಕಿ : ಇಬ್ಬರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಚಾರ್ಮಾಡಿ ಘಾಟ್ ಏಳನೇ ತಿರುವಿನಲ್ಲಿ ಲಾರಿ ಮತ್ತು ಓಮ್ನಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಶನಿವಾರ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿಯಲ್ಲಿ ಮಕ್ಕಳು ಸೇರಿ ಒಟ್ಟು 6 ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ.