ಮನೆಗೆ ಸಿಡಿಲು ಬಡಿದು ಇಬ್ಬರು ಆಸ್ಪತ್ರೆಗೆ : ಉಪಕರಣಗಳು ಹಾನಿ

ಸಿಡಿಲಿನ ಆಘಾತಕ್ಕೆ ಗೋಡೆ ಬಿರುಕು ಬಿಟ್ಟಿರುವುದು

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಜಿಬೈಲು ಕೊಡ್ಡೆ ಅಂಗನವಾಡಿ ಸಮೀಪದ ಕೊಲ್ಲಿ ಉದ್ಯೋಗಿ ಅಬ್ದುಲ್ಲ ಎಂಬವರ ಮನೆಗೆ ಸೋಮವಾರ ಮುಂಜಾನೆ 3.30ರ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಅಬ್ದುಲ್ಲರ ಮಕ್ಕಳಾದ ಶಾಹಿಲ್ (13), ಮನ್ಸಿಲ್ (21) ಎಂಬವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಅಬ್ದುಲ್ಲರ ಪತ್ನಿ ಸುಹರಾ ಯಾವುದೇ ಗಾಯಗೊಳ್ಳದೆ ಪಾರಾಗಿದ್ದಾರೆ. ಗಾಯಗೊಂಡವರಿಗೆ ಮಂಜೇಶ್ವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಸಿಡಿಲಿನ ಆಘಾತದಿಂದ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮೂರು ಫ್ಯಾನ್, ಟೀವಿ ಹಾಗೂ ವಯರಿಂಗ್ ಉರಿದು ನಾಶಗೊಂಡಿದೆ.