ಬೈಕ್ ಅಪಘಾತ : ಇಬ್ಬರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಸ್ತೆ ದಾಟುತ್ತಿರುವ ಮಧ್ಯೆ ಬೈಕ್ ಡಿಕ್ಕಿ ಹೊಡೆದ ಅಪಘಾತದಲ್ಲಿ ವಿದ್ಯಾರ್ಥಿ ಹಾಗೂ ಬೈಕ್ ಪ್ರಯಾಣಿಕ ಗಾಯಗೊಂಡಿದ್ದಾರೆ.

ಪೆರುವಾಡು ನಿವಾಸಿ ಬಡುವನ್ ಕುಂಞÂಯವರ ಪುತ್ರಿ ಹಾಗೂ ಕುಂಬಳೆ ಸರಕಾರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಸಫ (9) ಹಾಗೂ ಬೈಕ್ ಪ್ರಯಾಣಿಕ ಕಾಸರಗೋಡು ಜ್ಯುವೆಲ್ಲರಿಯೊಂದರ ನೌಕರ ಆಸಿಫ್ (23) ಗಾಯಗೊಂಡಿದ್ದಾರೆ.

ಇವರನ್ನು ಸಮೀಪದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.

LEAVE A REPLY