ಕಾರು-ರಿಕ್ಷಾ ಡಿಕ್ಕಿ, ಇಬ್ಬರಿಗೆ ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕೋಟತಟ್ಟು ಗ್ರಾಮ ಪಡುಕೆರೆ ಆಸ್ಮಾ ಮಂಜಿಲ್ ನಿವಾಸಿ ಅಬ್ದುಲ್ ಜಲಾಲ್ (35) ತನ್ನ ರಿಕ್ಷಾವನ್ನು ಕೋಟ ಕಡೆಯಿಂದ ಅಂಬಲಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಉಪ್ಪೂರು ಜಂಕ್ಷನ್ ಬಳಿ ಕಾರೊಂದು ಓವರಟೇಕ್ ಭರಾಟೆಯಲ್ಲಿ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ರಸ್ತೆ ಬದಿಗೆ ಮಗುಚಿ ಬಿದ್ದಿದ್ದು, ರಿಕ್ಷಾ ಚಾಲಕ ಅಬ್ದುಲ್ ಜಲಾಲ್ ಮತ್ತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೆನೆಡಿಕ್ಟ್ ರಾಡ್ರಿಗಸ್ ಗಾಯಗೊಂಡಿದ್ದಾರೆ ಎಂದು ದೂರಲಾಗಿದೆ.