ರಿಕ್ಷಾ-ಬೈಕ್ ಡಿಕ್ಕಿ : ಇಬ್ಬರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಳತ್ತೂರು ಜಾರಂ ಬಳಿ ರಿಕ್ಷಾ-ಬೈಕ್ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಸವಾರ ಕಳತ್ತೂರು ಅಡ್ಕತೊಟ್ಟಿ ನಿವಾಸಿ ಧನೇಶ್ (21), ಆಟೋ ಚಾಲಕ ಕಳತ್ತೂರಿನ ಹರ್ಷಾದ್ (20) ಗಾಯಗೊಂಡವರಾಗಿದ್ದಾರೆ. ಈ ಪೈಕಿ ಧನೇಶ್ ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಹರ್ಷಾದನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ರಿಕ್ಷಾ ಡಿಕ್ಕಿ : ಮಹಿಳೆ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆರ್ಲ ಪೇಟೆಯಲ್ಲಿ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿರಂತಡ್ಕ ನಿವಾಸಿ ಶ್ರೀಧರ ಭಟ್ ಪತ್ನಿ ಜಯಶ್ರೀ (55) ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪೆರ್ಲ ಪೇಟೆಯಲ್ಲಿ ನಡೆದುಹೋಗುತ್ತಿದ್ದ ಜಯಶ್ರೀಯವರಿಗೆ ಹಿಂದಿನಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ.

ಈ ಸಂಬಂಧ ರಿಕ್ಷಾ ಚಾಲಕನ ವಿರುದ್ಧ ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.