ಅಕ್ರಮ ಗೋ ಮಾಂಸ ಸಾಗಾಟ ಇಬ್ಬರ ಸೆರೆ

ಪಿಕಪ್ ವಾಹನದಲ್ಲಿ ಪತ್ತೆ ದನದ ಚರ್ಮಗಳು

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿ : ಅಕ್ರಮವಾಗಿ ಗೋವುಗಳ ಚರ್ಮ ಹಾಗೂ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದನ್ನು ಪುದುವೆಟ್ಟು ಎಂಬಲ್ಲಿ ಸೋಮವಾರ ಬೆಳಿಗ್ಗೆ ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ವಾಹನವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ
ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ಬೆಳಿಗ್ಗೆ 9 ಗಂಟೆ ವೇಳೆ ಈ ಕಾರ್ಯಾಚರಣೆ ನಡೆಸಿದ್ದರು  ಪಿಕಪ್ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಅದರಲ್ಲಿದ್ದ ಸುಮಾರು 100 ದನದ ಹಸಿ ಚರ್ಮವನ್ನು ಮತ್ತು ಮಾಂಸವನ್ನು ವಶಕ್ಕೆ ಪಡೆದಿದ್ದಾರೆ
ಸಾಗಾಟ ಮಾಡುತ್ತಿದ್ದ ಕುಪ್ಪೆಟ್ಟಿಯ ಅಬ್ದುಲ್ ಹಾರಿಸ್ ಹಾಗೂ ಮಹಮ್ಮದ್ ನಿಜಾಮ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ  ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ