ಪಡುಬಿದ್ರಿಯಲ್ಲಿ ಎರಡು ತಲೆಯ ಸತ್ತ ಹಾವು ಪತ್ತೆ

ಪಡುಬಿದ್ರಿ ಪೇಟೆಯಲ್ಲಿ ಪತ್ತೆಯಾದ ಎರಡು ತಲೆಯ ಹಾವಿನ ಕಳೇಬರ

 

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸಪ್ನಾ ಸೂಪರ್ ಮಾರುಕಟ್ಟೆಯ ಮುಂಭಾಗ ಸತ್ತಿರುವ ಎರಡು ತಲೆಯ ಹಾವು ಪತ್ತೆಯಾಗಿದೆ.

ಬಾರೀ ಬೆಲೆಯುಳ್ಳದ್ದು ಎನ್ನಲಾಗಿದ್ದ ಈ ಹಾವನ್ನು ಯಾರೋ ಕಳ್ಳ ಸಾಗಾಟ ನಡೆಸುತ್ತಿದ್ದಾಗ ಸತ್ತಿರುವುದನ್ನು ಈ ಭಾಗದಲ್ಲಿ ಎಸೆದು ಹೋಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ ಸಾರ್ವಜನಿಕರು.

ವಿಚಿತ್ರ ಹಾವನ್ನು ಕಂಡ ಸಾರ್ವಜನಿಕರು ಈ ಹಾವನ್ನು ವೀಕ್ಷಿಸಿ ತಮಗೆ ತೋಚಿದಂತೆ ಮಾತಾಡಿದ್ದರು. ಈ ಎರಡು ತಲೆಯ ಹಾವಿನ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿ ಪ್ರಕಟಗೊಂಡಿದ್ದರಿಂದ ಅದನ್ನು ಕಣ್ಣಾರೇ ನೋಡುವುದಕ್ಕಾಗಿ ಜನ ಸ್ಥಳದಲ್ಲಿ ಸೇರ ತೊಡಗಿದ್ದಾರೆ.

ಪಡುಬಿದ್ರಿ ಪೊಲೀಸರು “ಹಿಂದಿನ ದಿನದ ರಾತ್ರಿ ರಸ್ತೆಯಲ್ಲಿದ್ದ ಹಾವನ್ನು ಲಾರಿ ನಿಲ್ಲಿಸಿದ ಚಾಲಕನೊಬ್ಬ ಕೋಲಿನ ಸಹಾಯದಿಂದ ಆ ಹಾವನ್ನು ಬದಿಗೆ ಸರಿಸಿ ಹೋಗಿದ್ದ. ಆದರೆ ಹತ್ತಿರ ಹೋಗಿ ನೋಡೋಣವೆಂದರೆ ಅಕಸ್ಮಾತ್ ಅದು ಸತ್ತ ನಾಗರಹಾವು ಆಗಿದ್ದರೆ ಮತ್ತೊಂದು ಸಮಸ್ಯೆ ಮೈಮೇಲೆ ಹಾಕಿಕೊಳ್ಳುವ ವ್ಯಾಪಾರ ಬೇಡ ಎಂಬ ದೃಷ್ಠಿಯಿಂದ ನಾವು ಹತ್ತಿರ ಹೋಗಿಲ್ಲ” ಎಂದಿದ್ದಾರೆ.