ಈಜಲು ಹೋದ ಇಬ್ಬರು ನೀರುಪಾಲು

ಅಪ್ಸರಕೊಂಡ ಕಡಲತೀರದಲ್ಲಿ ನೆರೆದ ಜನ

 

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ಸೋಮವಾರ ಈಜಲು ಹೋದ ಇಬ್ಬರು ನೀರುಪಾಲಾಗಿದ್ದಾರೆ.

ಕೊಪ್ಪಳ ಮೂಲದ ಜಯಂತ ಜೋಶಿ ಹಾಗೂ ಬೆಂಗಳೂರು ಯಶವಂತಪುರದ ನೈವೇಶ ವೀರಯ್ಯ ನೀರುಪಾಲಾದವರು. ಬಿಇ ವಿದ್ಯಾರ್ಥಿಗಳಾಗಿರುವ ಇವರು ಇಡಗುಂಜಿಯಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆಂದು 16 ಸೇಹಿತರೊಂದಿಗೆ ಬಂದಿದ್ದರು. ಇವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.