ಮ್ಯಾನ್ ಹೋಲ್ ದುರಂತ : ಇಬ್ಬರು ಉಸಿರುಗಟ್ಟಿ ಸಾವು

ಬೆಂಗಳೂರು : ನಗರದ ಎಇಸಿಎಸ್ ಲೇಔಟಿನ ಹೋಟೆಲ್ ಒಂದರ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕಾರ್ಯಕ್ಕೆ ನೇಮಿಸಲಾದ ಇಬ್ಬರು ಕಾರ್ಮಿಕರು  ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಘಟನೆಯ ಸಂಬಂಧ ಎಚ್ಚೆಎಎಲ್ ಪೊಲೀಸರು ಹೋಟೆಲಿನ ಮ್ಯಾನೇಜರ್ ಆಯುಷ್ ಗುಪ್ತಾ, ಸಿಬ್ಬಂದಿ ವೆಂಕಟೇಶ್ ಎಂಬವರನ್ನು ಬಂಧಿಸಿದ್ದು ಮಾಲಕ ಅವಿನಾಶ್ ಗುಪ್ತಾ ತಲೆಮರೆಸಿಕೊಂಡಿದ್ದಾನೆ.

ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ರಾಯಚೂರಿನ

ರಾಮು (25) ಹಾಗೂ ರವಿ (28) ಅವರನ್ನು ನೇಮಿಸಲಾಗಿತ್ತು. ಮೊದಲು ಟ್ಯಾಂಕ್ ಪ್ರವೇಶಿಸಿದ ರಾಮು ಅಲ್ಲಿ ಕುಸಿದಾಗ, ರವಿ  ಒಳಗೆ ಹೋಗಿದ್ದು ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇಬ್ಬರ ಬಳಿಯೂ ಯಾವುದೇ ಸುರಕ್ಷಾ  ಸಾಧನಗಳಿರಲಿಲ್ಲವೆಂದು ಹೇಳಲಾಗಿದೆ.

LEAVE A REPLY