ವಿದ್ಯುತ್ ಕಂಬಕ್ಕೆ ಗುದ್ದಿ ಇಬ್ಬರು ಸ್ಕೂಟರ್ ಸವಾರರ ದುರ್ಮರಣ

ಮೃತ ಶಿವಕುಮಾರ್, ಸನಿಲ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕ್ಷೇತ್ರವೊಂದರ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಪೈಕಿ 15ರ ಪ್ರಾಯದ ಬಾಲಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ತೃಕ್ಕನಾಡ್ ಕ್ಷೇತ್ರದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಬೇಕಲ ಪೆÇಲೀಸ್ ಠಾಣಾ ಸಮೀಪವಾಸಿ ಶಿವಕುಮಾರ್ (45) ಹಾಗೂ ಸಹೋದರಿಯ ಪತಿ ಶಣ್ಮುಗ (56) ಸಾವನ್ನಪ್ಪಿದ ದುರ್ದೈವಿಗಳು. ಷಣ್ಮುಗನ ಪುತ್ರ ಹಾಗೂ ಫಿಷರೀಶ್ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿ ಸನಿಲ(15)ನನ್ನು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರ ಜೀವ ಉಳಿಸಲು ಸಾಧ್ಯವಾಗಿಲ್ಲ. ಈ ಎರಡು ಕುಟುಂಬಗಳು ಒಂದೇ ಮನೆಯಲ್ಲಿ ವಾಸಿಸುತ್ತಿದೆ.